ಕುಂಬಳೆ: ಶಿಷ್ಯರ ಹಿತಕ್ಕಾಗಿ ಶ್ರೀ ಗುರುಗಳು ಕರುಣಿಸಿದ ಸುವರ್ಣಪಾದುಕಾ ಸವಾರಿಯ ಮೂರನೇ ಆವೃತ್ತಿ ಗುರುವಾರ ಸಂಜೆ ಗುಂಪೆ ವಲಯದಿಂದ ಕುಂಬಳೆಗೆ ಆಗಮಿಸಿತು. ವಲಯದ ಕಣಿಪುರ ಘಟಕ ಪ್ರಧಾನರಾದ ಗುರುಮೂರ್ತಿ ಮೇಣ ಇವರ ಶಾಂತಿಪಳ್ಳದ ಅಭಿರಾಮ ನಿವಾಸದಲ್ಲಿ ಸುವರ್ಣ ಪಾದುಕೆಯನ್ನು ವಲಯ ಪದಾಧಿಕಾರಿಗಳು, ಘಟಕ ಪ್ರಧಾನರು, ಶಿಷ್ಯವೃಂದ, ಪೂರ್ಣ ಕುಂಭ ಹಾಗೂ ವೇದ ಘೋಷದಿಂದ ಸ್ವಾಗತಿಸಿದರು. ಅನಂತಪುರ ಘಟಕ ಪ್ರಧಾನ ಬಾಲಕೃಷ್ಣ ಶರ್ಮ ದಂಪತಿಗಳು ಮಠದ ಆಚಾರ್ಯರಾದ ಗಜಾನನ ಭಟ್ ಅವರ ನೇತೃತ್ವದಲ್ಲಿ ಧೂಳೀ ಪೂಜೆ ನೆರವೇರಿಸಿದರು.
ವಲಯಾಧ್ಯಕ್ಷರಾದ ಡಾ. ಡಿ.ಪುರುಷೋತ್ತಮ ಭಟ್ ಸ್ವಾಗತಿಸಿ ಪಾದುಕಾ ಸವಾರಿಯ ಉದ್ದೇಶ ಹಾಗೂ ಮಹತ್ವವನ್ನು ತಿಳಿಸಿದರು. ಭಾನುವಾರ ಬೆಳಿಗ್ಗೆ ಗುರುವಂದನೆ ಹಾಗೂ ಉಪಹಾರದ ನಂತರ ಮನೆ ಮನೆ ಸವಾರಿ ಪ್ರಾರಂಭಿಸಲಾಯಿತು. ಹೊಸಮನೆ ಶಿವರಾಮ ಭಟ್, ರಮಾನಂದ ಪ್ರಸಾದ್ ಕುಂಜಾರು, ಕಾನ ಹೊಸಮನೆ ಸತ್ಯನಾರಾಯಣ ಭಟ್, ಕುಂಜರಿಕಾನ ನಾರಾಯಣ ಭಟ್, ಗಂಗರಮಜಲು ರಾಜಾರಾಮ ಭಟ್, ಪರ್ತಿಕ್ಕಾರು ಶ್ಯಾಮ ಭಟ್ ಇವರ ಮನೆಗಳಿಗೆ ತೆರಳಿ ಪಾದುಕಾ ಪೂಜೆ ನೆರವೇರಿಸಲಾಯಿತು. ವಸತಿ ಮನೆಯಲ್ಲಿ ಬಿಕ್ಷಾಂಗ ಪಾದುಕಾ ಪೂಜೆ ನಡೆಯಿತು. ಭೋಜನ ನಂತರ ಪುನಃ ಸವಾರಿ ಪ್ರಾರಂಭಿಸಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠ, ವೆಂಕಟಕೃಷ್ಣ ಭಟ್ ಹಿಳ್ಳೆಮನೆ ಹಾಗೂ ಕಾನ ಮೂಡಕರೆ ಮಹೇಶ ಭಟ್ ಇವರ ಮನೆಗಳಲ್ಲಿ ಪಾದುಕಾ ಪೂಜೆ ನಡೆಸಲಾಯಿತು. ಸಂಜೆ ನೀರ್ಚಾಲು ವಲಯಕ್ಕೆ ಬೀಳ್ಕೊಡಲಾಯಿತು.


.jpg)
