ಫರಿದಾಬಾದ್: ಎರಡು-ಮೂರು ದಿನ ಮಣ್ಣಿನಡಿ ಇದ್ದು ಸರ್ಕಸ್ ಮಾಡಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪ್ರತಿಬಾರಿ ಯಶಸ್ವಿಯಾಗುತ್ತಿದ್ದ ಯುವಕ ಈ ಬಾರಿ ಮಣ್ಣಿನಡಿಯಲ್ಲೇ ಮೃತಪಟ್ಟಿದ್ದಾರೆ. ಹರಿಯಾಣದ ನುಹ್ಜಿಲ್ಲೆಯ ಖೋರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಈ ಸಾಹಸದಲ್ಲಿ ಪರಿಣಿತನಾಗಿದ್ದ 27 ವರ್ಷದ ದೀಪಕ್‌ನನ್ನು ಚೀಲದೊಳಗೆ ಜೀವಂತವಾಗಿ ಇರಿಸಿ ಮೂರು ದಿನ ಮಣ್ಣಿನಡಿ ಹೂತು ಹಾಕಲಾಗುತ್ತಿತ್ತು.
ಪ್ರತಿ ಬಾರಿಯೂ ಈ ಸರ್ಕಸ್‌ನಲ್ಲಿ ಆ ಯುವಕ ಗೆಲುವು ಸಾಧಿಸಿ, ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈ ಬಾರಿ ಮಣ್ಣಿನಡಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫರಿದಾಬಾದ್‌ನ ಗೌಂಚಿ ಗ್ರಾಮದ ನಿವಾಸಿ ದೀಪಕ್ ರೋಚಕ ಸಾಹಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಜುಲೈ 23 ರಂದು ದೀಪಕ್‌ನನ್ನು ಮಣ್ಣಿನಡಿಯಲ್ಲಿ ಹೂತುಹಾಕಲಾಗಿತ್ತು. 3 ಮೂರು ದಿನಗಳ ಬಳಿಕ ಅವರನ್ನು ಮಣ್ಣಿನಿಂದ ಮೇಲೆತ್ತಲು ಪ್ರಯತ್ನಿಸಿದಾಗ ಉಸಿರಾಡುತ್ತಿರಲಿಲ್ಲ. ಅಷ್ಟರಲ್ಲಿ ಆ ಯುವಕ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಸರ್ಕಸ್ ಆಯೋಜಕರ ವಿರುದ್ಧ ದೂರು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಕೃಷ್ಣ ಕುಮಾರ್ ಮಾಹಿತಿ ನೀಡಿದ್ದಾರೆ.
ಎಐ ಚಿತ್ರ

