ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಪ್ರತಿ ತಿಂಗಳು ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಜನರಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇನ್ನೇನು ಜೂನ್ ಮುಗಿದು ಜುಲೈ ತಿಂಗಳು ಬರುತ್ತಿದ್ದು, ವರ್ಷದ ಈ ಏಳನೇ ತಿಂಗಳಲ್ಲಿಯೂ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ವೈದ್ಯರ ದಿನ, ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಅಂತಾರಾಷ್ಟ್ರೀಯ ಹುಲಿ ದಿನದ ವರೆಗೆ ಯಾವೆಲ್ಲಾ ಪ್ರಮುಖ ದಿನಾಚರಣೆಗಳನ್ನು ಆಚರಿಸಲಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ:
ಜುಲೈ 1 – ರಾಷ್ಟ್ರೀಯ ವೈದ್ಯರ ದಿನ
ಜುಲೈ 1 – ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನ
ಜುಲೈ 1 – ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
ಜುಲೈ 6 – ವಿಶ್ವ ಪ್ರಾಣಿಜನ್ಯ ಕಾಯಿಲೆಗಳ ದಿನ
ಜುಲೈ 7 – ವಿಶ್ವ ಚಾಕೊಲೇಟ್ ದಿನ
ಜುಲೈ 7 – ಜಾಗತಿಕ ಕ್ಷಮೆ ದಿನ
ಜುಲೈ 10 – ಜಾಗತಿಕ ಇಂಧನ ಸ್ವಾತಂತ್ರ್ಯ ದಿನ
ಜುಲೈ 11 – ವಿಶ್ವ ಜನಸಂಖ್ಯಾ ದಿನ
ಜುಲೈ 12 – ಕಾಗದದ ಚೀಲ ದಿನ
ಜುಲೈ 12 – ಮಲಾಲಾ ದಿನ
ಜುಲೈ 13: ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ
ಜುಲೈ 15 – ವಿಶ್ವ ಯುವ ಕೌಶಲ್ಯ ದಿನ
ಜುಲೈ 17 – ವಿಶ್ವ ಎಮೋಜಿ ದಿನ
ಜುಲೈ 18 – ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
ಜುಲೈ 20 – ಅಂತಾರಾಷ್ಟ್ರೀಯ ಚೆಸ್ ದಿನ
ಜುಲೈ 22 – ರಾಷ್ಟ್ರೀಯ ಧ್ವಜ ದಿನ
ಜುಲೈ 22 – ರಾಷ್ಟ್ರೀಯ ಮಾವು ದಿನ
ಜುಲೈ 25 – ವಿಶ್ವ ಭ್ರೂಣಶಾಸ್ತ್ರಜ್ಞರ ದಿನ
ಜುಲೈ 26 – ಕಾರ್ಗಿಲ್ ವಿಜಯ್ ದಿವಸ್
ಜುಲೈ 26 – ರಾಷ್ಟ್ರೀಯ ಪೋಷಕರ ದಿನ (ಜುಲೈ ನಾಲ್ಕನೇ ಭಾನುವಾರ)
ಜುಲೈ 28 – ವಿಶ್ವ ಪ್ರಕೃತಿ ಸಂರಕ್ಷಣಾ ದಿನ
ಜುಲೈ 28 – ವಿಶ್ವ ಹೆಪಟೈಟಿಸ್ ದಿನ
ಜುಲೈ 29 – ಅಂತಾರಾಷ್ಟ್ರೀಯ ಹುಲಿ ದಿನ
ಜುಲೈ 30 – ಅಂತಾರಾಷ್ಟ್ರೀಯ ಸ್ನೇಹ ದಿನ

