HEALTH TIPS

ಉಚಿತವಾಗಿ CIBIL Score ಚೆಕ್ ಮಾಡುವುದು ಹೇಗೆ? ಈ ಸರಳ ವಿಧಾನಗಳನ್ನು ಅನುಸರಿಸಿ

 ಪ್ರಸ್ತುತ ದಿನಗಳಲ್ಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಉತ್ತಮ ಆದಾಯ ಮಾತ್ರ ಸಾಕಾಗುವುದಿಲ್ಲ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮೊದಲು ಗಮನಿಸುವುದು ನಿಮ್ಮ CIBIL Score. ಈ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಲೋನ್‌ ಅಪ್ರೂವಲ್ ಸುಲಭವಾಗುತ್ತದೆ. ಅಲ್ಲದೆ ಕಡಿಮೆ ಬಡ್ಡಿದರದಲ್ಲಿಯೂ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ತಿಳಿಯಲು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಲವು ಅಧಿಕೃತ ವೆಬ್‌ಸೈಟ್‌ಗಳು ಮತ್ತು ಬ್ಯಾಂಕ್‌ಗಳು ವರ್ಷಕ್ಕೆ ಒಮ್ಮೆ ಅಥವಾ ನಿರ್ದಿಷ್ಟ ಅವಧಿಯಲ್ಲಿ ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವ ಅವಕಾಶ ನೀಡುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

CIBIL Score ಎಂದರೇನು?

ಸಿಬಿಲ್ ಸ್ಕೋರ್ ಎನ್ನುವುದು 300 ರಿಂದ 900 ಅಂಕಗಳ ನಡುವಿನ ಕ್ರೆಡಿಟ್ ಸ್ಕೋರ್ ಆಗಿದೆ. ಇದು ಗ್ರಾಹಕರ ಸಾಲ ಮರುಪಾವತಿ ಮತ್ತು ಕ್ರೆಡಿಟ್ ಬಳಕೆಯ ಹಿಸ್ಟರಿ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ 750 ರಿಂದ 900 ಇದ್ದರೆ ಅತ್ಯುತ್ತಮ ಸ್ಕೋರ್, 700 ರಿಂದ 749 ರ ನಡುವ ಇದ್ದರೆ ಉತ್ತಮ, ಹಾಗೆಯೇ 650 ರಿಂದ 699 ರ ನಡುವೆ ಇದ್ದರೆ ಸರಾಸರಿ, 650 ಕ್ಕಿಂತ ಕಡಿಮೆ ಇದ್ದರೆ ಸಾಲ ಪಡೆಯಲು ಕಷ್ಟವಾಗುವ ಸಾಧ್ಯತೆ ಎಂದು ಹೇಳಲಾಗುತ್ತದೆ.

ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

– ಸಿಬಿಲ್‌ ಅಧಿಕೃತ ವೆಬ್‌ಸೈಟ್ ಬಳಸಿ

ನಿಮ್ಮ ಸಿಬಿಲ್‌ ಸ್ಕೋರ್ ತಿಳಿಯಲು ಅತ್ಯಂತ ಸುರಕ್ಷಿತ ಮಾರ್ಗ ಅಧಿಕೃತ ಸಿಬಿಲ್ ವೆಬ್‌ಸೈಟ್ ಆಗಿದೆ. ಇಲ್ಲಿ ಹೆಸರು, ಜನ್ಮ ದಿನಾಂಕ, PAN ಸಂಖ್ಯೆ, ಮೊಬೈಲ್ ಸಂಖ್ಯೆ, ಸೇರಿದಂತೆ ಕೆಲವು ಮಾಹಿತಿ ನೀಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ವೀಕ್ಷಿಸಬಹುದು.

– ಬ್ಯಾಂಕ್ ಅಥವಾ ಫಿನ್‌ಟೆಕ್ ಆಪ್‌ಗಳ

ಪ್ರಸ್ತುತ ಹಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸೇವಾ ಆಪ್‌ಗಳು ತಮ್ಮ ಗ್ರಾಹಕರಿಗೆ ಉಚಿತ ಸಿಬಿಲ್‌ ಸ್ಕೋರ್ ಪರಿಶೀಲನೆ ಸೌಲಭ್ಯ ಒದಗಿಸುತ್ತಿವೆ. ಬ್ಯಾಂಕ್ ಮೊಬೈಲ್ ಆಪ್‌ ತೆರೆಯಿರಿ. ಬಳಿಕ ಕ್ರೆಡಿಟ್‌ ಸ್ಕೋರ್‌ ಅಥವಾ ಸಿಬಿಲ್‌ ಸ್ಕೋರ್‌ ವಿಭಾಗಕ್ಕೆ ಹೋಗಿ. ಆ ನಂತರ PAN ಸಂಖ್ಯೆ ದೃಢೀಕರಿಸಿ. ಕೆಲವೇ ಕ್ಷಣಗಳಲ್ಲಿ ನಿಮ್ಮ ಸ್ಕೋರ್ ಕಾಣಿಸುತ್ತದೆ.

ಸಿಬಿಲ್‌ ಸ್ಕೋರ್ ಪರಿಶೀಲಿಸಲು ಬೇಕಾಗುವ ದಾಖಲೆಗಳು

ಉಚಿತವಾಗಿ ಸಿಬಿಲ್‌ ಸ್ಕೋರ್ ಪರಿಶೀಲಿಸಲು ಸಾಮಾನ್ಯವಾಗಿ PAN ಕಾರ್ಡ್, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಜನ್ಮ ದಿನಾಂಕ ಹಾಗೂ ವಿಳಾಸದ ಮಾಹಿತಿ (ಕೆಲವು ಸಂದರ್ಭಗಳಲ್ಲಿ) ದಾಖಲೆಗಳು ಬೇಕಾಗುತ್ತವೆ.

ಕೊನೆಯ ಮಾತು

ಇಂದಿನ ಡಿಜಿಟಲ್ ಯುಗದಲ್ಲಿ ಸಿಬಿಲ್‌ ಸ್ಕೋರ್ ನಿಮ್ಮ ಹಣಕಾಸಿನ ವಿಶ್ವಾಸಾರ್ಹತೆಯನ್ನು ತೋರಿಸುವ ಪ್ರಮುಖ ಸೂಚ್ಯಂಕವಾಗಿದೆ. ಭವಿಷ್ಯದಲ್ಲಿ ಮನೆ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆಯುವ ಯೋಜನೆ ಇದ್ದರೆ, ನಿಮ್ಮ ಸಿಬಿಲ್‌ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಅದನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries