HEALTH TIPS

ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸ್ಮಾರಕ 'ಕನ್ನಡ ಭವನ' ಉದ್ಘಾಟನಾ ಸಂಬಂಧಿ ಸಭೆ

ಬದಿಯಡ್ಕ: ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ನೆನಪಲ್ಲಿ ಬದಿಯಡ್ಕ ಕಲ್ಲಕಳೆಯದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಕನ್ನಡ ಭವನದ ಉದ್ಘಾಟನಾ ಸಂಬಂಧ ದಿನಾಂಕ ನಿಗದಿಪಡಿಸುವ ಸಹಿತ ವಿವಿಧ ವಿಷಯಗಳ ಪೂರ್ವಭಾವೀ ಸಭೆ ಗುರುವಾರ ಕಲ್ಲಕಳೆಯದ ಕನ್ನಡ ಭವನ ಕಟ್ಟಡದಲ್ಲಿ ನಡೆಯಿತು. 


ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿಮರದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್, ಬ್ಲಾ.ಪಂ.ಅಧ್ಯಕ್ಷ ಅಬ್ದುಲ್ಲ ಕುಂಞÂ ಚೆರ್ಕಳ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಶಂಕರ ಡಿ., ಜಿ.ಪಂ. ಸದಸ್ಯರಾದ ರಾಮಪ್ಪ ಮಂಜೇಶ್ವರ, ಸೋಮಶೇಖರ ಜೆ.ಎಸ್., ಹಿರಿಯ ನೇತಾರ ಕುಂಟಾರು ರವೀಶ ತಂತ್ರಿ, ಜನಪ್ರತಿನಿಧಿಗಳಾದ ಮಾಹಿನ್ ಕೇಳೋಟ್, ಶ್ಯಾಂಪ್ರಸಾದ್ ಮಾನ್ಯ, ಎಂ.ಎಸ್.ಮೊಯ್ದೀನ್, ಬಾಲಕೃಷ್ಣ ಶೆಟ್ಟಿ, ಅಶ್ವಿನಿ ಮೊಳೆಯಾರ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ,ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ನಾಸಿ ಕೊಚ್ಚಿನ್, ಕಯ್ಯಾರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ, ಡಾ.ಪ್ರಸನ್ನ ರೈ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಡಾ.ಎಂ.ಎಸ್.ಮದಬಾವಿ, ಭಗತ್ ರಾಜ್ ನಿಜಾಂಕರಿ, ಡಾ.ಸಂಜೀವಕುಮಾರ ಅತಿವಾಳೆ, ಶಿವರೆಡ್ಡಿ ಖ್ವಾದೇಡ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. 


ಈ ಸಂದರ್ಭ ಮಲೆಯಾಳಂ ಭಾಷಾ ಮಸೂದೆ, ಕನ್ನಡ ಶಾಲೆಗಳಲ್ಲಿ ಮಲೆಯಾಳಿ ಶಿಕ್ಷಕರ ನೇಮಕ, ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ, ಕನ್ನಡಿಗರ ಶೈಕ್ಷಣಿಕ, ಸಾಂಸ್ಕøತಿಕ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಸಂಬಂಧಪಟ್ಟ ಅಧಿಕೃತರೊಂದಿಗೆ ಮಾತುಕತೆ ಸೌಹಾರ್ಧಯುತ ಪರಿಹಾರಕ್ಕೆ ತೀರ್ಮಾನಿಸಲಾಯಿತು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಸ್ವಾಗತಿಸಿ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕನ್ನಡ ಭವನದ ಉದ್ಘಾಟನೆ ಸಂಬಂಧ ಸಮಿತಿ ರಚಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೊತೆಯಾಗಿ ಕರೆಸಿ ನಿರ್ವಹಿಸಲು ತೀರ್ಮಾನಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries