HEALTH TIPS

ಇಂದಿನಿಂದ ಬಾಲಗೋಕುಲ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮಾವೇಶ ಸಂಭ್ರಮ-ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಕಾರ್ಯಕ್ರಮ

ಕಾಸರಗೋಡು: ಬಾಲಗೋಕುಲಂ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮ್ಮೇಳನ ಜುಲೈ 10ರಿಂದ 12ರ ವರೆಗೆ  ಕಾಸರಗೋಡು ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕೇರಳದ ಬಾಲಗೋಕುಲದಲ್ಲಿ ಉತ್ತರ ಕೇರಳ ಮತ್ತು ದಕ್ಷಿಣ ಕೇರಳ ಎಂಬ ಎರಡು ವಿಭಾಗಗಳಿದ್ದು, ಉತ್ತರ ಕೇರಳದಲ್ಲಿ ತ್ರಿಶ್ಯೂರಿನಿಂದ  ಕಾಸರಗೋಡು ವರೆಗೆ ಏಳು ಕಂದಾಯ ಜಿಲ್ಲೆಗಳನ್ನು ಒಳಗೊಂಡಿದೆ. ಉತ್ತರ ಕೇರಳದಲ್ಲಿ  2ಸಾವಿರ ಹಾಗೂ ದ. ಕೇರಳದಲ್ಲಿ 2200 ಬಾಲಗೋಕುಲ ಚಟುವಟಿಕೆ ನಡೆಸುತ್ತಿರುವುದಾಗಿ  ಬಾಲಗೋಕುಲ ಉತ್ತರ ಕೇರಳ ಸಮಿತಿ ಉಪಧ್ಯಕ್ಷ ಪಿ.ಎಂ ಶ್ರೀಧರನ್ ಮಾಸ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

10ರಂದು ಬೆಳಗ್ಗೆ 10.30ರಿಂದ ಸಂಜೆ 6ರ ತನಕ ಪ್ರಾಂತ ನಿರ್ವಾಹಕ ಸಮಿತಿ ಸಭೆ ನಡೆಯಲಿದೆ. 11ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕರ್ತರ ಅಭ್ಯಾಸವರ್ಗವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು.  ಉತ್ತರ ಕೇರಳ ಸಮಿತಿಯ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಎಂ.ರಾಧಾಕೃಷ್ಣನ್ 'ನವ ಯುಗದ ಸಂಘಟಕ'ಎಂಬ ವಿಷಯದ ಬಗ್ಗೆ ಮಾತನಾಡುವರು.  

ಸಂಜೆ 5.15ಕ್ಕೆ ನಡೆಯುವ ಬಾಲ ಪ್ರತಿಭಾ ಸಂಗಮವನ್ನು ಚಿನ್ಮಯ ಮಿಷನ್ ಕೇರಳ ಪ್ರಾಂತ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಉದ್ಘಾಟಿಸುವರು. ರಾಜೇಶ್ ನಾದಾಪುರಂ ಅವರಿಂದ ಬೌದ್ಧಿಕ್, ಸಾಂಸ್ಕøತಿಕ ಕರ್ಯಕ್ರಮ ನಡೆಯುವುದು. 12ರಂದುಬೆಳಗ್ಗೆ7.30ರಿಂದ ಗೋಕುಲ ಜಿಲ್ಲಾ ಸಂಪೂರ್ಣ ಸಮಿತಿ ಸಭೆ, 10ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕೇಂದ್ರ ಇಂಧನ ಖಾತೆರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ಉದ್ಘಾಟಿಸುವರು.  ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಉತ್ತರ ಕೇರಳ ಸಮಿತಿಯ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ನಡೆಯುವ ಪ್ರತಿನಿಧಿ ಸಮ್ಮೇಳನದಲ್ಲಿ ಪಿ.ಎಂ ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ನಂತರ ವಾರ್ಷಿಕ ಯೋಜನೆ, ಪದಾಧಿಕಾರಿಗಳ ಘೋಷಣೆ, ಸಮಾರೋಪಭಾಷಣ, ಧ್ವಜಾವರೋಹಣ ನಡೆಯುವುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸ್ವಾಗತಸಮಿತಿ ಕಾರ್ಯಾಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಹರೀಶ್ಚಂದ್ರ ನಾಯ್ಕ್, ಪ್ರಚಾರ ಸಮಿತಿ ಸಂಚಾಲಕ ರವೀಂದ್ರ ರೈ ಸಿರಿಬಾಗಿಲು, ಬಾಲಗೋಕುಲಂ ಜಿಲ್ಲಾ ರಕ್ಷಾಧಿಕಾರಿ ಕೆ.ಜಯರಾಮ ಶೆಟ್ಟಿ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಮವ್ವಾರು ಉಪಸ್ಥಿತರಿದ್ದರು.



 


  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries