HEALTH TIPS

ಸಿಂಧೂ ಜಲ ಒಪ್ಪಂದ: ಕೆನಡಾ ಬೆಂಬಲ ಕೋರಿದ ಪಾಕ್‌

 ಇಸ್ಲಾಮಾಬಾದ್‌: ಸಿಂಧೂ ಜಲ ಒಪ್ಪಂದವನ್ನು ಮರುಸ್ಥಾಪಿಸುವ ಸಂಬಂಧ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್‌ ದಾರ್‌ ಅವರು ಕೆನಡಾದ ಸಹಾಯವನ್ನು ಕೋರಿದ್ದಾರೆ. 


ಎರಡು ದಿನಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್‌ ಅವರೊಂದಿಗೆ ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

'1960ರ ಸಿಂಧೂ ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯ ಒಪ್ಪಂದವಾಗಿದೆ. ಇದು ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತದೆ. ಪೂರ್ವ ನದಿಗಳನ್ನು ಭಾರತಕ್ಕೆ ಮತ್ತು ಪಶ್ಚಿಮ ನದಿಗಳನ್ನು ಹೆಚ್ಚಾಗಿ ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

'ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ತಕ್ಷಣವೇ ಮರುಸ್ಥಾಪಿಸಲು, ನೀರನ್ನು ಯುದ್ಧ ತಂತ್ರವಾಗಿ ಬಳಸುವುದನ್ನು ಕೊನೆಗೊಳಿಸಲು ಮತ್ತು ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದವನ್ನು ಎತ್ತಿಹಿಡಿಯಲು ಕೆನಡಾ ಸೇರಿದಂತೆ ಮಿತ್ರ ರಾಷ್ಟ್ರಗಳ ಬೆಂಬಲವನ್ನು ಕೋರುತ್ತೇವೆ' ಎಂದು ದಾರ್‌ ಮನವಿ ಮಾಡಿದ್ದಾರೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಒಂದು ದಿನದ ನಂತರ, ಭಾರತವು ಈ ಒಪ್ಪಂದವನ್ನು ಅಮಾನತಿನಲ್ಲಿ ಇರಿಸಿತ್ತು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries