ಕಾಸರಗೋಡು: ತಲೆಗೆ ಹೊಡೆದು ಸ್ನೇಹಿತನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದ ಅಪರಾಧಿ, ಕುಂಬ್ಡಾಜೆ ಮವ್ವಾರ್ ಒಡಂಬಳೆ ಹೌಸ್‍ನ ಮುರಳೀಕೃಷ್ಣನ್ (23) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶ ಟಿ.ಎಚ್. ರಂಜಿತ ಅವರು ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 60ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಐದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು ನಿವಾಸಿ, 17ರ ಹರೆಯದ ಯುವಕನನ್ನು ಹಣದ ವಿವಾದಕ್ಕೆ ಸಂಬಂಧಿಸಿ ಮುರಳೀಕೃಷ್ಣನ್ ತನ್ನ ಹಿತ್ತಿಲ ರಬ್ಬರ್ ತೋಟದಲ್ಲಿ ಕಬ್ಬಿಣದ ಹ್ಯಾಂಡಲ್‍ನಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ದೂರಿನಂತೆ ಬದಿಯಡ್ಕ ಠಾಣೆ ಪೋಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

