ಕಾಸರಗೋಡು : ಪಳ್ಳಿಕ್ಕೆರೆ ನಿವಾಸಿ ಅಬ್ದುಲ್ ಅಹದ್ ಎಂಬವರನ್ನು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಾದ ಯೂಟ್ಯೂಬರ್ ಖಾದರ್ ಕರಿಪೆÇ್ಪಡಿ ಹಾಗೂ ತಂಡದ ಪತ್ತೆಗಾಗಿ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಿದ್ದಾರೆ. ಪ್ರಕರಣದಲ್ಲಿ ಖಾದರ್ ಸಹೋದರರಾದ ರಾಶಿದ್ ಹಾಗೂ ಅಶ್ರಫ್ ಎಂಬಿವರು ಪ್ರಕರಣದಲ್ಲಿ ಶಾಮೀಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.
ಅಹದ್ ದೂರಿನನ್ವಯ ಕಾಸರಗೋಡು ನಗರ ಠಾಣೆ ಪೆÇಲೀಸರು ಖಾದರ್ ಕರಿಪೆÇ್ಪಡಿÁ್ಹಗೂ ತಂಡದ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಗಲ್ಫ್‍ನಲ್ಲಿ ನಡೆದ ಹಣ ವ್ಯವಹಾರಕ್ಕೆ ಸಂಬಂಧಿಸಿ ಅಬ್ದುಲ್ ಅಹದ್‍ರನ್ನು ಖಾದರ್ ಕರಿಪೆÇ್ಪಡಿ ಹಾಗೂ ತಂಡ ಇಂಟರ್‍ಲಾಕ್‍ನಿಂದ ಹೊಡೆದು, ಚೂಪಾದ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿರುವ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಅಹದ್ ಕಾಸರಗೋಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

