ಕಾಸರಗೋಡು: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಮೊಗ್ರಾಲ್ ಪುತ್ತೂರು ಪಂಚಾಯಿತಿ ಸಮಿತಿ ಸಮ್ಮೇಳನ ಕಾಸರಗೋಡು ಕೊರುವೈಲ್ ಶ್ರೀ ದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಜರುಗಿತು. ಸಂಘಟನೆ ಮಧೂರು ಪ್ರಾದೇಶಿಕ ಸಮಿತಿ ಅಧ್ಯಕ್ಷ ವಸಂತ ನಾಯಕ್ ಕೊರುವೈಲ್ ಸಮಾರಂಭ ಉದ್ಘಾಟಿಸಿದರು. ಬಿಎಂಎಸ್ ಮೊಗ್ರಾಲ್ ಪುತ್ತೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಕೆ.ಕೆ. ಸುರೇಶ್ (ಬಿಇಎಲ್)ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಬಿ.ಮನೀಷ್, ಜಿಲ್ಲಾ ಜತೆ ಕಾರ್ಯದರ್ಶಿ ಗುರುದಾಸ್ ಚೇನಕ್ಕೋಡು, ಮಿನಿ ವಿಜಯನ್, ಮೊದಲಾದವರು ಉಪಸ್ಥಿತರಿದ್ದರು.
ಮಧೂರು ವಲಯ ಕಾರ್ಯದರ್ಶಿ ಸಿ.ಎಚ್. ಶ್ರೀಧರ ಚೆನಕೋಡ್ ಸ್ವಾಗತಿಸಿದರು. ನವೀನ್ ಕೈಗೋಟೆ ವರದಿ ಮಂಡಿಸಿದರು. ಮೊಗ್ರಾಲ್ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಸದಾಶಿವ ಪಂಜದಗುಡ್ಡೆ ವಂದಿಸಿದರು.

