HEALTH TIPS

ಆಟೋರಿಕ್ಷಾ ಚಾಲಕರು ಇನ್ನು ತೂಫಾನ್ ವಾರಿಯರ್ಸ್: ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಪ್ರಬಲ ಕೋಟೆ ನಿರ್ಮಿಸುವುದಾಗಿ ಗೃಹ ಸಚಿವರ ಘೋಷಣೆ

ತಿರುವನಂತಪುರಂ: ಇಡೀ ಸಮಾಜವನ್ನು ಕಬಳಿಸುತ್ತಿರುವ ಮಾದಕ ವಸ್ತುಗಳ ಮಾಫಿಯಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾಲುದಾರರಾಗಲು ಆಟೋರಿಕ್ಷಾ ಕಾರ್ಮಿಕರು ಮುಂದೆ ಬಂದಿದ್ದಾರೆ.

ಆಟೋರಿಕ್ಷಾ ಚಾಲಕರು ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಅಭಿಯಾನಗಳ ಅತ್ಯಂತ ಶಕ್ತಿಶಾಲಿ ಪ್ರಚಾರಕರಾಗಬಹುದು ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದರು.  


ತಿರುವನಂತಪುರಂ ನಗರದ ಆಟೋರಿಕ್ಷಾ ಚಾಲಕರನ್ನು 'ತೂಫಾನ್ ವಾರಿಯರ್ಸ್', ಮಾದಕ ವಸ್ತುಗಳ ವಿರೋಧಿ ಪಡೆ ಎಂದು ಘೋಷಿಸಿ ಅವರು ಮಾತನಾಡುತ್ತಿದ್ದರು.

ಮಾದಕ ವಸ್ತುಗಳ ಗ್ಯಾಂಗ್‍ಗಳು ಅಥವಾ ಅವುಗಳ ಬಳಕೆಯ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದರೆ, ಸಮುದಾಯವನ್ನು ದೊಡ್ಡ ವಿಪತ್ತಿನಿಂದ ರಕ್ಷಿಸಬಹುದು. ಚಾಲಕರು ಮತ್ತು ಪೋಲೀಸರು ಖಾಕಿ ಧರಿಸುವವರು. ಎರಡೂ ಗುಂಪುಗಳು ಪರಸ್ಪರ ಸ್ನೇಹಿತರಾಗಲು ಸಾಧ್ಯವಾಗುತ್ತದೆ. ಅನಗತ್ಯ ವಿಷಯಗಳಿಗೆ ಪೋಲೀಸರು ಆಟೋರಿಕ್ಷಾ ಚಾಲಕರಿಗೆ ಕಿರುಕುಳ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿರುವರು. ಗೃಹ ಸಚಿವರು ನಗರ ಪೋಲೀಸ್ ಆಯುಕ್ತರ ಕಚೇರಿ ಆವರಣದಿಂದ ತೆರೆದ ಜೀಪಿನಲ್ಲಿ ಆಟೋರಿಕ್ಷಾ ಚಾಲಕರೊಂದಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದರು.

ರಾಜ್ಯ ಪೋಲೀಸ್ ಮುಖ್ಯಸ್ಥ ರಾವಡ ಚಂದ್ರಶೇಖರ್ ಸಚಿವರೊಂದಿಗೆ ಇದ್ದರು. ಸಚಿವರು ಆಟೋರಿಕ್ಷಾ ಚಾಲಕರಿಗೆ ತೂಫಾನ್ ವಾರಿಯರ್ಸ್ ಬ್ಯಾಡ್ಜ್‍ಗಳನ್ನು ವಿತರಿಸಿದರು. ಆಟೋರಿಕ್ಷಾಗಳಿಗೆ ತೂಫಾನ್ ಜಾಗೃತಿ ಸ್ಟಿಕ್ಕರ್‍ಗಳನ್ನು ಅಂಟಿಸಲಾಗಿತ್ತು.

ನಗರ ಪೋಲೀಸ್ ಆಯುಕ್ತ ಡಾ. ಅರುಲ್ ಆರ್.ಬಿ. ಕೃಷ್ಣ, ಡಿ.ಸಿ.ಪಿ. ಕೆ.ಎಸ್. ಶಹನ್ಶಾ, ದೀಪಕ್ ಧಂಕರ್, ಶೀನ್ ತರೈಲ್ ಮತ್ತು ಪೋಲೀಸ್ ತರಬೇತಿ ಕಾಲೇಜಿನ ಪ್ರಾಂಶುಪಾಲ ಆರ್. ಜಯಶಂಕರ್ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries