ಕಾಸರಗೋಡು: ಕೆಲಸದ ನೆಪದಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನನ್ನು ಅಪಹರಿಸಿ ಮೊಬೈಲ್ ಫೆÇೀನ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮೇಲ್ಪರಂಬ ಪೆÇಲೀಸರು ಬಂಧಿಸಿದ್ದಾರೆ. ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿಗಳಾದ ಉಬೈದುಲ್ಲಾ ಇಜಾಸ್ (25) ಮುಹಮ್ಮದ್ ಫರ್ಹಾನ್ (21) ಮತ್ತು ಚೌಕಿ ನಿವಾಸಿ ಅಹಮ್ಮದ್ ಮುಹಮ್ಮದ್ (40) ಬಂಧಿತರು. ಮೇಲ್ಪರಂಬ ಎಸ್‍ಐ ಟಿ. ಅಖಿಲ್ ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಚೆರ್ಕಳ ಇಂದಿರಾನಗರದಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ ರಾಮನ್ ಬರ್ಮನ್ (33)ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ರಾಮನ್ ಬರ್ಮನ್ ಅವರನ್ನು ತಂಡ ವಾಸ್ತವ್ಯವಿರುವ ಕೊಠಡಿಯಿಂದ ಕರೆದೊಯ್ದು, ಚಟ್ಟಂಚಾಲ್ ಫ್ಲೈಓವರ್ ಭಾಗಕ್ಕೆ ಕರೆದೊಯ್ದು, ಚೆನ್ನಾಗಿ ಥಳಿಸಿ ಸುಮಾರು 16,000 ರೂ. ಮೌಲ್ಯದ ಮೊಬೈಲ್ ಫೆÇೀನ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇದನ್ನು ತಡೆಯಲು ಯತ್ನಿಸಿದಾಗ ಕೊಲೆಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


