HEALTH TIPS

ಕಡಿಮೆ ವಿದ್ಯುತ್ ಬಳಸಿ: ದೇಶದ ಜನರಿಗೆ ಇರಾನ್‌ ಕರೆ

 ದುಬೈ: ತನ್ನ ವಿದ್ಯುತ್ ಮೂಲಸೌಕರ್ಯಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದು, ಇದು ಸಂಘರ್ಷದ ತೀವ್ರತೆಯನ್ನು ಸಾಬೀತು ಮಾಡಿದೆ. 


ದಕ್ಷಿಣದ ಪ್ರಾಂತ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಉಂಟಾಗಿದ್ದು, ಆ ಪ್ರದೇಶದ ಜನರಿಗೆ ಕಡಿಮೆ ವಿದ್ಯುತ್ ಬಳಸುವಂತೆ ಇರಾನ್‌ನ ಇಂಧನ ಸಚಿವಾಲಯ ಕರೆ ನೀಡಿದೆ.

ಅದಾಗ್ಯೂ, ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ನಡೆದಿದೆಯೇ ಅಥವಾ ಪ್ರಸರಣ ಮಾರ್ಗಗಳು, ಉಪಕರಣಗಳ ಮೇಲೆ ದಾಳಿ ಆಗಿದೆಯೇ? ಎಂಬ ಬಗ್ಗೆ ಸಚಿವಾಲಯ ವಿವರಗಳನ್ನು ನೀಡಿಲ್ಲ ಎಂದು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಹೊರ್ಮುಜ್‌ ವಿಷಯವಾಗಿ ಅಮೆರಿಕ ಮತ್ತು ಇರಾನ್‌ ನಡುವಿನ ಮಧ್ಯಂತರ ಒಪ್ಪಂದ ಮುರಿದು ಬಿದ್ದಿದ್ದು, ಪರಸ್ಪರ ದಾಳಿ-ಪ್ರತಿದಾಳಿ ನಡೆಸುತ್ತಿವೆ. ಇರಾನ್‌ನ ಮೂಲಸೌಕರ್ಯಗಳು, ಸೇತುವೆಗಳು, ವಿದ್ಯುತ್ ಸ್ಠಾವರಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ಮಾಡಿದರೆ, ಗಲ್ಫ್‌ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries