HEALTH TIPS

ಕರಿಬೇವು ಫ್ರಿಡ್ಜ್‌ನಲ್ಲಿಟ್ಟರೂ ಕಪ್ಪಾಗುತ್ತಿದೆಯೇ? ಈ ಮ್ಯಾಜಿಕ್ ಟ್ರಿಕ್ ಫಾಲೋ ಮಾಡಿದ್ರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತೆ!

 ಕರಿಬೇವು ಫ್ರಿಡ್ಜ್‌ನಲ್ಲಿಟ್ಟರೂ ಎರಡೇ ದಿನಕ್ಕೆ ಕಪ್ಪಾಗುತ್ತಿದೆಯೇ? ಇನ್ಮುಂದೆ ಆ ಚಿಂತೆ ಬೇಡ! ಅಡುಗೆಯ ಘಮ ಹೆಚ್ಚಿಸುವ ಕರಿಬೇವು ತಿಂಗಳುಗಳ ಕಾಲ ಫ್ರೆಶ್ ಆಗಿಡಲು ಇಲ್ಲಿವೆ ಕೆಲವು ಟ್ರಿಕ್ಸ್.


ದೀರ್ಘಕಾಲದವರೆಗೆ ಹೇಗೆ ಸಂರಕ್ಷಿಸಿಡಬಹುದು?.

ಅಡುಗೆಯ ಘಮ ಹೆಚ್ಚಿಸಲು ಕರಿಬೇವು ಅತ್ಯಗತ್ಯ. ಆದರೆ ಮಾರುಕಟ್ಟೆಯಿಂದ ತಂದ ತಾಜಾ ಕರಿಬೇವು ಫ್ರಿಡ್ಜ್‌ನಲ್ಲಿಟ್ಟ ಎರಡೇ ದಿನಕ್ಕೆ ಕಪ್ಪಾಗುವುದು ಅಥವಾ ಬಾಡಿ ಹೋಗುವುದು ಸಾಮಾನ್ಯ ಸಮಸ್ಯೆ. ಆದ್ದರಿಂದ ಮನೆಯಲ್ಲಿ ಕರಿಬೇವು ಗಿಡ ಇಲ್ಲದವರು ಮಾರುಕಟ್ಟೆಯಿಂದ ತಂದ ಕರಿಬೇವನ್ನು ದೀರ್ಘಕಾಲದವರೆಗೆ ಹೇಗೆ ಸಂರಕ್ಷಿಸಿಡಬಹುದು? ಇಲ್ಲಿದೆ ನೋಡಿ ಮಾಹಿತಿ.

ಕರಿಬೇವು ಕಪ್ಪಾಗಲು ಕಾರಣವೇನು?

ಕರಿಬೇವಿನಲ್ಲಿರುವ ಅತಿಯಾದ ತೇವಾಂಶವೇ (ಒoisಣuಡಿe) ಅದು ಕಪ್ಪಾಗಲು ಮುಖ್ಯ ಕಾರಣ. ತೊಳೆದ ನಂತರ ಸರಿಯಾಗಿ ಒಣಗಿಸದೆ ಅಥವಾ ಹಾಗೆಯೇ ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿ ನೀರು ಶೇಖರಣೆಯಾಗಿ ಎಲೆಗಳು ಕೊಳೆಯಲು ಪ್ರಾರಂಭಿಸುತ್ತವೆ.

ಕರಿಬೇವನ್ನು ಸ್ಟೋರ್ ಮಾಡಲು ಇಲ್ಲಿದೆ ಸುಲಭ ವಿಧಾನ

1. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ )

ಕರಿಬೇವನ್ನು ಮಾರುಕಟ್ಟೆಯಿಂದ ತಂದ ತಕ್ಷಣ ಅದರ ಕಟ್ಟು ಬಿಡಿಸಿ. ಕಡ್ಡಿಗಳಿಂದ ಎಲೆಗಳನ್ನು ಪ್ರತ್ಯೇಕಿಸಿ ಚೆನ್ನಾಗಿ ತೊಳೆಯಿರಿ. ನಂತರ ಒಂದು ಕಾಟನ್ ಬಟ್ಟೆಯ ಮೇಲೆ ಹರಡಿ ಅದರ ಮೇಲಿರುವ ನೀರು ಪೂರ್ತಿ ಒಣಗುವಂತೆ ಮಾಡಿ. ಈಗ ಒಂದು ಏರ್ ಟೈಟ್ ಡಬ್ಬದ ಅಡಿಯಲ್ಲಿ ಟಿಶ್ಯೂ ಪೇಪರ್ ಹಾಸಿ, ಅದರ ಮೇಲೆ ಒಣಗಿದ ಎಲೆಗಳನ್ನು ಹಾಕಿಡಿ. ಮೇಲೆ ಮತ್ತೊಂದು ಟಿಶ್ಯೂ ಪೇಪರ್ ಇಟ್ಟು ಮುಚ್ಚಳ ಮುಚ್ಚಿ. ಇದು ವಾರಗಳ ಕಾಲ ಫ್ರೆಶ್ ಆಗಿರುತ್ತದೆ.

2. ಹಗುರವಾಗಿ ಬಿಸಿ ಮಾಡಿ ಸಂಗ್ರಹಿಸಿ ((Light Crisping Method

)

ಇದು ಕರಿಬೇವನ್ನು ದೀರ್ಘಕಾಲ ಇಡಲು ಉತ್ತಮ ಹ್ಯಾಕ್. ಎಲೆಗಳನ್ನು ತೊಳೆದು ಒಣಗಿಸಿದ ನಂತರ, ಒಂದು ನಾನ್-ಸ್ಟಿಕ್ ಪ್ಯಾನ್‌ನಲ್ಲಿ 1-2 ನಿಮಿಷಗಳ ಕಾಲ ಹಗುರವಾಗಿ ಬಿಸಿ ಮಾಡಿ (ಎಲೆಗಳು ಅತಿ ಹೆಚ್ಚು ಒಣಗಬಾರದು, ಕೇವಲ ತೇವಾಂಶ ಹೋದರೆ ಸಾಕು). ಇದು ಪೂರ್ತಿ ತಣ್ಣಗಾದ ಮೇಲೆ ಏರ್ ಟೈಟ್ ಡಬ್ಬದಲ್ಲಿ ತುಂಬಿಸಿಡಿ.

3. ಐಸ್ ಕ್ಯೂಬ್ ವಿಧಾನ 

ನೀವು ತಿಂಗಳುಗಳ ಕಾಲ ಕರಿಬೇವನ್ನು ಸಂಗ್ರಹಿಸಬೇಕೆಂದರೆ ಇದು ಬೆಸ್ಟ್ ಐಡಿಯಾ. ಕರಿಬೇವು ಎಲೆಗಳನ್ನು ತೊಳೆದು ಒಣಗಿಸಿ. ನಂತರ ಐಸ್ ಟ್ರೇನ ಒಂದೊಂದು ಗುಂಡಿಯಲ್ಲಿ ಕೆಲವು ಎಲೆಗಳನ್ನು ಹಾಕಿ ಸ್ವಲ್ಪ ನೀರು ತುಂಬಿಸಿ ಫ್ರೀಜರ್‌ನಲ್ಲಿಡಿ. ಕರಿಬೇವು ಮಂಜುಗಡ್ಡೆಯಂತಾದ ಮೇಲೆ ಆ ಕ್ಯೂಬ್‌ಗಳನ್ನು ತೆಗೆದು ಒಂದು ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇಡಿ. ಅಡುಗೆಗೆ ಬೇಕಾದಾಗ ಒಂದು ಕ್ಯೂಬ್ ತೆಗೆದು ನೇರವಾಗಿ ಸಾಂಬಾರ್ ಅಥವಾ ಒಗ್ಗರಣೆಗೆ ಬಳಸಬಹುದು.

4. ಜಿಪ್ ಲಾಕ್ ಬ್ಯಾಗ್ ಮತ್ತು ಕಿಚನ್ ಟವಲ್

ನಿಮ್ಮ ಬಳಿ ಬಾಕ್ಸ್ ಇಡಲು ಜಾಗವಿಲ್ಲದಿದ್ದರೆ, ಎಲೆಗಳನ್ನು ಕಿಚನ್ ಟವಲ್ ಅಥವಾ ಪೇಪರ್‌ನಲ್ಲಿ ಸುತ್ತಿ ಜಿಪ್ ಲಾಕ್ ಬ್ಯಾಗ್‌ನಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಫ್ರಿಡ್ಜ್‌ನಲ್ಲಿಡಿ. ಇದು ಕೂಡ ಕರಿಬೇವು ಕಪ್ಪಾಗದಂತೆ ತಡೆಯುತ್ತದೆ. ಈ ಸರಳ ವಿಧಾನಗಳನ್ನು ಪಾಲಿಸುವ ಮೂಲಕ ನೀವು ಮಾರುಕಟ್ಟೆಯಿಂದ ತಂದ ಕರಿಬೇವನ್ನು ತಿಂಗಳುಗಳ ಕಾಲ ಬಳಸಬಹುದು ಮತ್ತು ಹಣವನ್ನು ಉಳಿಸಬಹುದು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries