ಉಪ್ಪಳ: ಮಂಗಲ್ಪಾಡಿ ಕುಕ್ಕಾರುನಲ್ಲಿರುವ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ಕಟ್ಟಡ ಇದೀಗ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಅಪಾಯಕಾರಿಯಾಗಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹೈಯರ್ ಸೆಕಂಡರಿ ತರಗತಿಯನ್ನು ಮಂಗಲ್ಪಾಡಿ ಪ್ಲಸ್-ಟು ಬ್ಲಾಕ್ ಕಟ್ಟಡದ ಬಳಿಯಲ್ಲಿರುವ ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಇಲ್ಲಿ ಒಂದರಿಂದ ನಾಲ್ಕನೇ ತರಗತಿ ತನಕ ಮಾತ್ರವಿದೆ. ಇದರ ಪರಿಸರದಲ್ಲಿರುವ ಹಳೆಯ ಕಟ್ಟಡಗಳು ಶೋಚನೀಯಾವಸ್ಥೆಯಿಂದ ಮುರಿದು ಬೀಳುತ್ತಿದೆ. ಕಾಡು ಪೊದೆಗಳು ತುಂಬಿ ಆತಂಕದ ಸ್ಥಿತಿ ಉಂಟಾಗಿದೆ. ದೊಡ್ಡ ದುರಂತ ಸಂಭವಿಸುವ ಮೊದಲೇ ಹಳೆಯ ಕಟ್ಟಡವನ್ನು ತೆರವುಗೊಳಿಸಬೇಕೆಂದು ಮಕ್ಕಳ ಹೆತ್ತವರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

.jpg)
