HEALTH TIPS

ಆರ್‍ಟಿಒ, ಪೋಲೀಸ್ ನೇತೃತ್ವದಲ್ಲಿ ನಡೆದ ಸಭೆಯಿಂದ ಹೊರ ನಡೆದ ಪಂ. ಜನಪ್ರತಿನಿಧಿಗಳು: ಕುಂಬಳೆಯಲ್ಲಿ ಪರಿಹಾರವಾಗದ ಬಸ್ ನಿಲುಗಡೆ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‍ಗಳ ನಿಲುಗಡೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಪರಿಹಾರವಾಗದೆ ಇನ್ನಷ್ಟು ಉಲ್ಭಣಾವಸ್ಥೆಗೆ ತಲುಪುತ್ತಿದೆ. ಸಮಸ್ಯೆ ಪರಿಹರಿಸಲು ಆರ್‍ಟಿಒ, ಪೋಲೀಸರ ನೇತೃತ್ವದಲ್ಲಿ ಬುಧವಾರ ನಡೆದ ಚರ್ಚೆ ಯಾವುದೇ ನಿರ್ಧಾರ  ಕೈಗೊಳ್ಳಲಾಗದೆ ಕೊನೆಗೊಂಡಿತು.  ಕುಂಬಳೆ ಪಂಚಾಯತಿ ಕಚೇರಿಯಲ್ಲಿ ಎಎಸ್‍ಪಿ ಅಚ್ಯುತ್ ಅಶೋಕ್, ಕುಂಬಳೆ ಸಿಐ ಬೈಜು ಕೆ ಜೋಸ್, ಆರ್‍ಟಿಒ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಪಂಚಾಯತಿ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಬ್ಲಾಕ್, ಜಿಲ್ಲಾ ಪಂಚಾಯತಿ ಸದಸ್ಯರು, ಬಸ್ ನೌಕರರು, ಬಸ್ ನೌಕರರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


ಸಭೆಯಲ್ಲಿ ಬದಿಯಡ್ಕ, ಪೆರ್ಲ, ಪೇರಾಲ್ ಕಣ್ಣೂರು ಭಾಗದಿಂದ ಬರುವ ಬಸ್‍ಗಳ ನೌಕರರು ತಮ್ಮ ಬಸ್‍ಗಳ ನಿಲುಗಡೆಗೆ ಸಂಬಂಧಿಸಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕುಂಬಳೆಯಲ್ಲಿ ಮೂಲಭೂತ ಸೌಕರ್ಯ ಏರ್ಪಡಿಸದೆ ದಿಢೀರ್ ಬಸ್ ನಿಲುಗಡೆ ಸ್ಥಳವನ್ನು ಬದಲಾಯಿಸುವಂತೆ ಪಂಚಾಯತ ತಿಳಿಸಿರುವುದೇ ಈಗಿನ ಸಮಸ್ಯೆಗೆ ಕಾರಣವೆಂದು ಬಸ್ ನೌಕರರು ಸಭೆಯಲ್ಲಿ ತಿಳಿಸಿದ್ದಾರೆ. ಕೆಲವು ವ್ಯಾಪಾರಿಗಳ ಹಿತಾಸಕ್ತಿಗಾಗಿ ಮಾತ್ರವೇ ಸೀತಾಂಗೋಳಿ ಭಾಗದಿಂದ ಬರುವ ಬಸ್‍ಗಳ ನಿಲುಗಡೆ ಸ್ಥಳವನ್ನು ಬದಲಾಯಿಸಲು ಪಂಚಾಯತಿ ಮುಂದಾಗಿದೆ. ನಿಲುಗಡೆ ಸ್ಥಳ ಬದಲಾಯಿಸಲು ಪಂಚಾಯತಿ, ಪೋಲೀಸ್ ಅಥವಾ ಆರ್‍ಟಿಒದಿಂದ ತಮಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಕೆಲವು ವ್ಯಾಪಾರಿಗಳು ಸೀತಾಂಗೋಳಿಯಿಂದ ಬಸ್ ಹತ್ತಿ ಕುಂಬಳೆಗೆ ತಲುಪಿದಾಗ ಬಸ್‍ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ಯುವಂತೆ ಒತ್ತಾಯಿಸಿದ್ದಾರೆ. ಆದರೆ ಅದು ಸಮಸ್ಯೆಗೆ ಕಾರಣವಾಗಲಿದೆಯೆಂದು ತಿಳಿಸಿದರೂ ಪಂಚಾಯತಿ ಆಡಳಿತ ಸಮಿತಿ ಬಸ್ ನಿಲ್ದಾಣ ಬದಲಾಯಿಸಲು ಒತ್ತಾಯಿಸಿದೆ ಎಂದು ಬಸ್ ನೌಕರರು ಆರೋಪಿಸಿದ್ದಾರೆ.

ಬಸ್ ನೌಕರರ ಅಹವಾಲನ್ನು ಆಲಿಸಿದ ಆರ್‍ಟಿಒ, ಪೋಲೀಸ್ ಅಧಿಕಾರಿಗಳು ಮೂಲಭೂತ ಸೌಕರ್ಯ ಏರ್ಪಡಿಸಿದ ಬಳಿಕ ಮಾತ್ರವೇ ಬಸ್ ನಿಲುಗಡೆ ಸ್ಥಳವನ್ನು ಬದಲಾಯಿಸಿದರೆ ಸಾಕು ಎಂದು ಪಂಚಾಯತಿಗೆ ನಿರ್ದೇಶಿಸಿದರು. ಈ ವೇಳೆ ನಾವು ಕೈಗೊಂಡ ನಿರ್ಧಾರವನ್ನು ಮಾತ್ರವೇ ಪೋಲೀಸ್ ಹಾಗೂ ಆರ್‍ಟಿಒ ಪಾಲಿಸಿದರೆ ಸಾಕು ಎಂದು ಪಂಚಾಯತಿ ಜನಪ್ರತಿನಿಧಿಗಳು ತಿಳಿಸಿದ್ದು, ಅದನ್ನು  ಒಪ್ಪಲು ಪೋಲೀಸ್, ಆರ್‍ಟಿಒ ಅಧಿಕಾರಿಗಳು ಸಿದ್ಧರಾಗಲಿಲ್ಲ. ಈ ಹಿನ್ನೆಲೆಯಲ್ಲಿ  ಹಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದ ಬಸ್‍ಗಳನ್ನು ತಡೆಯುವುದಾಗಿ ತಿಳಿಸಿ ಪಂಚಾಯತಿ ಜನಪ್ರತಿನಿಧಿಗಳು ಸಭೆಯಿಂದ ಮರಳಿ ದರು. ಇದೇ  ವೇಳೆ ಬಸ್‍ಗಳನ್ನು ತಡೆದಲ್ಲಿ ಸಾರಿಗೆ ಅಡಚಣೆ ಉಂಟಾಗದ ರೀತಿಯಲ್ಲಿ ಬಸ್‍ಗಳನ್ನು ರಸ್ತೆ ಬದಿ ನಿಲ್ಲಿಸಿ ಪ್ರತಿಭಟಿಸುವುದಾಗಿ ಬಸ್ ನೌಕರರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕುಂಬಳೆಯಲ್ಲಿ ಪಂಚಾಯತಿ ವ್ಯವಸ್ಥೆಗೊಳಿಸಿದ ಬಸ್ ನಿಲುಗಡೆ ವ್ಯವಸ್ಥೆ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries