ಮುಳ್ಳೇರಿಯ: ನಾರಂಪಾಡಿ ಸಂತ ಜೋನ್ ದೆ ಬ್ರಿಟ್ಟೋ ಇಗರ್ಜಿಯ ನೇತೃತ್ವದಲ್ಲಿ ಚರ್ಚಿನ ಆರೋಗ್ಯ ಆಯೋಗ, ಯುವ ಆಯೋಗ, ಕುಟುಂಬ ಆಯೋಗ, ಐಸಿವೈಎಂ ಹಾಗೂ ಜಿವೆಲ್ಸ್ ಗ್ರೂಪ್ ಇವರ ಸಹಭಾಗಿತ್ವದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ಫಾತಿಮಾ ಎ.ಎಲ್.ಪಿ. ಶಾಲೆ ನಾರಂಪಾಡಿಯಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡರು. ಹೃದಯ, ಸಾಮಾನ್ಯ ವೈದ್ಯಕೀಯ, ಕ್ಯಾನ್ಸರ್ ರೋಗದ ಪರಿಶೀಲನೆ,ಎಲುಬು-ಸಂಧಿ, ಮಾನಸಿಕ ಆರೋಗ್ಯ, ದಂತ, ಸ್ತ್ರೀರೋಗ ಹಾಗೂ ಚರ್ಮರೋಗ ತಜ್ಞ ವೈದ್ಯರು ಜನರನ್ನು ಪರೀಕ್ಷಿಸಿ ಅಗತ್ಯ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಇಸಿಜಿ, ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ, ಸ್ತನ ಕ್ಯಾನ್ಸರ್ ತಪಾಸಣೆ ಮತ್ತಿತರ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ಯಾನ್ಸರ್ ತಪಾಸಣೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರು.
ಶಿಬಿರದ ಯಶಸ್ಸಿಗೆ ಜಿವೆಲ್ಸ್ ಗ್ರೂಪ್, ವೈದ್ಯರ ತಂಡ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಐಸಿವೈಎಂ ಸ್ವಯಂಸೇವಕರು ಹಾಗೂ ವಿವಿಧ ಆಯೋಗಗಳ ಸದಸ್ಯರು ಶ್ರಮವಹಿಸಿದ್ದರು. ಸಂತ ಜಾನ್ ಡಿ ಬ್ರಿಟ್ಟೋ ಚರ್ಚಿನ ಧರ್ಮಗುರು ವ. ಫಾ. ಅನಿಲ್ ಫ್ರಾನ್ಸಿಸ್ ಪಿಂಟೊ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದರ. ಡಾ. ಮಹಿಮಾ ಶೆಟ್ಟಿ ಮತ್ತು ಡಾ. ಕವಿತಾ ಅವರು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮಾಹಿತಿ ಕಾರ್ಯಗಾರವನ್ನು ನಡೆಸಿದರು. ವೇದಿಕೆಯಲ್ಲಿ ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಜೋನಿ ಕ್ರಾಸ್ತ, ಕಾರ್ಯದರ್ಶಿ ರವಿಕುಮಾರ್ ಕ್ರಾಸ್ತ, ಅವಿಲಾ ಕಾನ್ವೆಂಟಿನಾ, ಸುಪಿರೇರ್ ಸಿ., ಜಾಸ್ಮಿನ್ ಲೂಯಿಸ್, ಫಾತಿಮಾ ಶಾಲೆಯ, ಮುಖ್ಯೋಪಾಧ್ಯಾಯನಿ, ಸಿ. ಪ್ರೆಸ್ಸಿಲ್ಲ ಡಿಕುನ್ನ, ಜುವೆಲ್ಸ್ ಗ್ರೂಪಿನ ಸಂಯೋಜಕ ಪ್ರವೀಣ್ ಲೋಬೊ ಮತ್ತು ಬೊನವಂಚರ್ ಡಿಸೋಜ ಉಪಸ್ಥಿತರಿದ್ದರು. ಪಾಲನಾ ಸಮಿತಿಯ ಆಯೋಗದ ಸಂಚಾಲಕ ರಾಜು ಸ್ಟೀಫನ್ ಕ್ರಾಸ್ತಾ ಸ್ವಾಗತಿಸಿ, ವೀರ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.

.jpg)
.jpg)
