HEALTH TIPS

ಪ್ರೊ.ಎ.ಶ್ರೀನಾಥ್ ಗೆ 'ರಾಷ್ಟ್ರೀಯ ರತ್ನ' ಪ್ರಶಸ್ತಿ ಪ್ರದಾನ

ಬದಿಯಡ್ಕ: ನವದೆಹಲಿ ಕೇಂದ್ರವಾಗಿರುವ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಪರಿಷತ್ತಿನ ಪ್ರತಿಷ್ಠಿತ "ರಾಷ್ಟ್ರೀಯ ರತ್ನ ಪ್ರಶಸ್ತಿ- 2026"  ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ. ಶ್ರೀನಾಥ್ ಕಾಸರಗೋಡು ಅವರಿಗೆ ಪ್ರದಾನ ಮಾಡಲಾಯಿತು. 


ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ನಿರ್ದೇಶಕ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರು ಪ್ರಶಸ್ತಿ ಪ್ರದಾನಗೈದರು. ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇoದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉಪ ಪೋಲೀಸ್ ಆಯುಕ್ತ ಎಚ್. ಮಂಜುನಾಥ್, ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ನಾರಾಯಣ ಗೌಡ ಸಹಿತ ಪ್ರಮುಖರು ಭಾಗವಹಿಸಿದರು. 

ಹಿರಿಯ ಚಿಂತಕ, ವಾಗ್ಮಿ, ಸಂಘಟಕ, ಜಾನಪದ ವಿದ್ವಾಂಸ, ಬೊಂಬೆಯಾಟ ಕಲಾವಿದ, ಸಮಾಜ ಸೇವಕ, ಧಾರ್ಮಿಕ ಮುಖಂಡರೂ ಆಗಿರುವ ಪ್ರೊ.ಎ.ಶ್ರೀನಾಥ್ ಅವರ ಬಹುಮುಖ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries