ಮಂಜೇಶ್ವರ: ಕೇಂದ್ರ ಸರ್ಕಾರದ ರೈತ ವಿರೊಧಿ ನೀತಿಗೆದುರಾಗಿ ಹಾಗೂ ರಸಗೊಬ್ಬರದ ಬೆಲೆಯೇರಿಕೆಗೆದುರಾಗಿ, ಅಮೇರಿಕಾದೊಂದಿಗೆ ಮಾಡಿದ ಜನವಿರೋಧಿ ಒಪ್ಪಂದಕ್ಕೆದುರಾಗಿ ರೈತ ಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ರಾಜ್ಯ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷ ಬಿ.ಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಮಾಸ್ತರ್, ಪ್ರಭಾಕರ ಶೆಟ್ಟಿ, ಸದಾನಂದ ಕೋರಿಕ್ಕಾರ್, ಚಂದ್ರಾವತಿ ಕುಳೂರು, ಲೋಕೇಶ, ಉಮೇಶ್ ಶೆಟ್ಟಿ, ನೇತೃತ್ವ ನೀಡಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು.

