ಮುಳ್ಳೇರಿಯ: ಕೃಷಿ ನಮ್ಮ ಸಂಸ್ಕøತಿ ಎಂಬ ಅರಿವನ್ನು ಮಕ್ಕಳಿಗೆ ಬೋಧಿಸುವ ಸಲುವಾಗಿ ಹಾಗೂ ಭತ್ತದ ಬೇಸಾಯವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಮವ್ವಾರು ಎ.ಯು.ಪಿ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮುಕ್ಕೂರ್ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಪ್ರಕಾಶನ್ ಅವರ ಗದ್ದೆಗೆ ಇಳಿದರು. ನೇಗಿಲು ಹೊಡೆಯುವುದು, ಗದ್ದೆ ಹದಗೊಳಿಸುವುದು ಮತ್ತು ನೇಜಿ ನೆಡುವುದು ಮಕ್ಕಳಿಗೆ ಕುತೂಹಲಕಾರಿ ದೃಶ್ಯವಾಗಿತ್ತು. ಎರಡು ಗಂಟೆಗಳ ಕಾಲ ಗದ್ದೆಯಲ್ಲಿ ಆಟವಾಡಿ, ಮರೆಯಲಾಗದ ನೆನಪುಗಳೊಂದಿಗೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಕ್ಕಳು ಮರಳಿದರು. ಎರಡನೇ ಶನಿವಾರದಂದು ಪೆÇೀಷಕರ ಸಂಪೂರ್ಣ ಸಹಕಾರದೊಂದಿಗೆ ಈ ಗದ್ದೆಯ ಅರಿವು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯೋಪಾಧ್ಯಾಯಿನಿ ಶೀಜಾ ಪಿ.ವಿ. ಉದ್ಘಾಟಿಸಿದರು. ಮಾತೃಸಮಿತಿ ಅಧ್ಯಕ್ಷೆ ರೇಷ್ಮಾ ಶುಭ ಹಾರೈಸಿದರು. ಶಾಲಾ ಎಸ್.ಆರ್.ಜಿ ಸಂಚಾಲಕ ರಾಜೇಶ್ ಅವರೊಂದಿಗೆ ಸೀಡ್ ಕೋ-ಆರ್ಡಿನೇಟರ್ ಅಂಜು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಿಕ್ಷಕರಾದ ಶ್ಯಾಮ್ ಸುಂದರ್, ಶ್ರೀದೇವಿ, ಶ್ರೀಧರನ್, ಅಶ್ವಿನಿ, ಉಷಾ, ಅಶ್ವಿನಿಕುಮಾರಿ, ಭವ್ಯ ಮತ್ತು ವಿಶಾಲಾಕ್ಷಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

.jpg)
