ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿರುವ 'ಡಿ-ಫೆÇೀಕ್' ಕಾರ್ನೀವಲ್ ಸರ್ಕಾರಿ ಕಾಲೇಜಿನಲ್ಲಿ ಜರುಗಿತು. ನಾಲ್ಕು ವೇದಿಕೆಗಳಲ್ಲಿ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಿತು. ಸಾಕ್ಷ್ಯಚಿತ್ರ ಪ್ರದರ್ಶನ, ಆಹಾರ ಮೇಳ, ಚಲನಚಿತ್ರೋತ್ಸವ, ಜಾನಪದ ಕಲಾ ಪ್ರದರ್ಶನ, ಪುಸ್ತಕ ಮೇಳ, ಜಾನಪದ ಕಲೆಗಳ ಕುರಿತ ಚರ್ಚೆ ಮತ್ತು ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು.
ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಸಮಾರಂಭ ಉದ್ಘಾಟಿಸಿದರು. ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷ ನಂದಾಜ್ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಸಬೀಶ್, ಜಾನಪದ ಗಾಯಕ ಅತುಲ್ ನರುಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ನಗರಸಭಾ ಸದಸ್ಯ ಅನಿಲ್ ಚೆನ್ನಿಕ್ಕರ, ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ವಿ.ಎಸ್. ಅನಿಲ್ಕುಮಾರ್, ಆಲ್ನಾ ವಿನೋದ್, ದಿಲ್ಜಿತ್ ಮತ್ತು ಶ್ರೀರಾಗ್ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕವಿತಾ ಕೃಷ್ಣನ್ ಸ್ವಾಗತಿಸಿದರು. ಸ್ವಾಗತ ಸಮಿತಿ ಸಂಚಾಲಕ ಆದಿನಾನ್ ಚಟ್ಟಂಚಾಲ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಅತುಲ್ ನರುಕರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿವಿಧ ಸಂಸ್ಕøತಿಗಳ ಸಂಗಮ ಭೂಮಿಯಗಿರುವ ಕಾಸರಗೋಡಿನಲ್ಲಿ ಸಾಂಸ್ಕøತಿಕ ವೈಶಿಷ್ಟ್ಯ ಪ್ರದರ್ಶಿಸುವ, ಪರಂಪರ-ಇತಿಹಾಸ ಎತ್ತಿಹಿಡಿಯುವಲ್ಲಿ ಡಿ-ಫೋಕ್ ಉತ್ಸವ ಸಹಕಾರಿಯಾಗಿತ್ತು.



