HEALTH TIPS

ಕಾರ್ಮಾರಲ್ಲಿ ಕೆಸರಡೊಂಜಿ ದಿನದ ಲೋಗೋ ಅನಾವರಣ ಮತ್ತು ಟಿ-ಶರ್ಟ್ ಬಿಡುಗಡೆ

ಬದಿಯಡ್ಕ: ಶ್ರೀ ಮಹಾವಿಷ್ಣು ಯುವಕವೃಂದ (ರಿ.), ಕಾರ್ಮಾರು ಇವರ ಆಶ್ರಯದಲ್ಲಿ ನಡೆಯಲಿರುವ ಕೆಸರಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ, ಎಡನೀರು ಮಠದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ತಮ್ಮ ದಿವ್ಯ ಹಸ್ತಗಳಿಂದ ಕೆಸರಡೊಂಜಿ ದಿನದ ಅಧಿಕೃತ ಲಾಂಛನ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಎಡನೀರು ಮಠದ ವ್ಯವಸ್ಥಾಪಕರಾದ ರಾಜೇಂದ್ರ ಕಲ್ಲೂರಾಯ ಅವರು ಕೆಸರಡೊಂಜಿ ದಿನದ  ಟಿ-ಶರ್ಟ್‍ಗಳನ್ನು ಬಿಡುಗಡೆಗೊಳಿಸಿದರು. 


ಸುಂದರ ಶೆಟ್ಟಿ ಕೊಲ್ಲಂಗಾನ, ರಾಮ ಕೆ. ಮಾನ್ಯ, ಮಹೇಶ್ ವಳಕುಂಜ, ವಿಜಯಕುಮಾರ್ ಮಾನ್ಯ, ಮಹಾವಿಷ್ಣು ಯುವಕವೃಂದದ ಅಧ್ಯಕ್ಷ ಪುರುಷೋತ್ತಮ ಕಾರ್ಮಾರು, ಕಾರ್ಯದರ್ಶಿ ಶಶಿಕಾಂತ್ ಶೆಟ್ಟಿ ಕಾರ್ಮಾರು, ಖಜಾಂಚಿ ರವೀಶ್ ಯಾದವ್ ಸೇರಿದಂತೆ ಯುವಕವೃಂದದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಆಗಸ್ಟ್ 30 ರಂದು ಕಾರ್ಮಾರು ಶ್ರೀ ಮಹಾವಿಷ್ಣು ದೇಗುಲದ ಪರಿಸರದಲ್ಲಿ ಕಾರ್ಯಕ್ರಮವು ಜರಗಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries