ಕಾಸರಗೋಡು: ಆಪರೇಷನ್ ತೂಫಾನ್ ಅಂಗವಾಗಿ, ನೀಲೇಶ್ವರ ಪೋಲೀಸ್ ಮತ್ತು ಪುನರ್ಜನಿ ಪುರುಷ ಸ್ವಯಂಸೇವಕ ಸಂಗದ ಜಂಟಿ ಆಶ್ರಯದಲ್ಲಿ ಉನ್ನತಿ ರಸ್ತೆ ಜಂಕ್ಷನ್, ತೈಕ್ಕಡಪ್ಪುರಂ, ನೀಲೇಶ್ವರದಲ್ಲಿ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಮಾಡಲಾಯಿತು. ಸಭೆಯನ್ನು ನೀಲೇಶ್ವರ ಸಬ್ ಇನ್ಸ್ ಪೆಕ್ಟರ್ ರತೀಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ನೀಲೇಶ್ವರ ನಗರಸಭಾ ಸದಸ್ಯರಾದ ಕೆ.ಪ್ರಕಾಶ್, ಬೀನಾ, ಶ್ರೀಜಾ ಸತ್ಯನ್, ವಿ.ಕೆ. ರಶೀದಾ, ಬಿ.ಸೀಮಾ, ಸಂಗಮದ ಅಧ್ಯಕ್ಷ ಕೆ.ವಿ. ಶಶಿಕುಮಾರ್, ಕಾರ್ಯದರ್ಶಿ ಕೆ.ವಿ. ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


