ಕಾಸರಗೋಡು: ಕೆಎಸ್ಸಾರ್ಟಿಸಿ ಪ್ರಿಯದರ್ಶಿನಿ ಯೋಜನೆಯನ್ವಯ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಸಂಪೂರ್ಣ ನೆಲಕಚ್ಚಿರುವ ಖಾಸಗಿ ಬಸ್ ಉದ್ಯಮವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾದ್ಯಂತ ನಡೆದ ಖಾಸಗಿ ಬಸ್‍ಗಳ ಸಾಂಕೇತಿಕ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದೆ. ಕೆಎಸ್ಸಾರ್ಟಿಸಿ ಸಂಚರಿಸುತ್ತಿರುವ ರೂಟ್‍ಗಳನ್ನು ಹೊರತುಪಡಿಸಿ ಉಳಿದೆಡೆ ಪ್ರಯಾಣಿಕರು ಸಂಚಾರಕ್ಕಾಗಿ ಪರದಾಡಬೇಕಾಯಿತು.
ಕೆಎಸ್ಸಾರ್ಟಿಸಿಯಲ್ಲಿ ಉಚಿತ ಪ್ರಯಾಣವನ್ನು ದಿನಕ್ಕೆ ಎರಡು ಬಾರಿ ಸೀಮಿತಗೊಳಿಸುವುದರೊಂದಿಗೆ ಇದಕ್ಕೆ ಮತದಾರರ ಗುರುತಿನ ಚೀಟಿ ಪರಿಗಣಿಸಬೇಕು, ಅಂತಾರಾಜ್ಯ ಸಂಚಾರದ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬಾರದು, ಉಚಿತ ಪ್ರಯಾಣ ಸೌಲಭ್ಯವನ್ನು ಕೇರಳದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಿ ಮತ್ತು ಅದನ್ನು ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗುವಂತೆ ಮಾಡಬೇಕು, ಡೀಸೆಲ್ ಮೇಲೆ ಶೇ. 50ರಷ್ಟು ಸಹಾಯಧನವನ್ನು ನೀಡಬೇಕು, ಎಲ್ಲಾ ಮಹಿಳಾ ಸರ್ಕಾರಿ ನೌಕರರನ್ನು ಉಚಿತ ಪ್ರಯಾಣ ಯೋಜನೆಯಿಂದ ಹೊರತುಪಡಿಸಿ, ವಿದ್ಯಾರ್ಥಿಗಳು ಹಾಗೂ 65 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರನ್ನು ಸೇರ್ಪಡೆಗೊಳಿಸಬೇಕು, ಖಾಸಗಿ ಬಸ್‍ಗಳ ರಸ್ತೆ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಕಾರ್ಮಿಕರ ಕಲ್ಯಾಣ ನಿಧಿಗೆ ನೀಡಬೇಕಾದ ಪಾಲನ್ನು ಸರ್ಕಾರವೇ ಭರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಸಲಾಗಿದೆ.
ಕಾಸರಗೋಡು ಅಣಂಗೂರಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಸ್ ಮಾಲಿಕರು, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೇರಳ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶರಣ್ಯ ಮನೋಜ್ ಧರಣಿ ಸತ್ಯಾಗ್ರಹ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಸಂಘಟನೆಯ ಗಿರಿ ಕೃಷ್ಣನ್, ಬಿಎಂಎಸ್‍ನ ಬಾಬುರಾಜ್, ಐಎನ್‍ಟಿಯುಸಿಯ ಪದ್ಮನಾಭನ್ ಉಪಸ್ಥಿತರಿದ್ದರು.
ಸಂಘಟನೆ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಕೇಂದ್ರ ಸಮಿತಿ ಸದಸ್ಯ ಸಿ.ಎ. ಮುಹಮ್ಮದ್ ಕುಞÂ, ಕೆ.ಎನ್. ಬಾಲಕೃಷ್ಣನ್, ಮುಹಮ್ಮದ್ ಕುಞÂಪಿ.ಎ., ಪಿ.ವಿ. ಪದ್ಮನಾಭನ್, ಎ.ವಿ. ಪ್ರದೀಪ್ ಕುಮಾರ್, ಹಮೀದ್ ಎಸ್.ಕೆ, ರಾಜೇಶ್ ಯು., ಸುಬ್ಬಣ್ಣ ಆಳ್ವ, ಕಾರ್ತಿಕ್ ರಾಜ್, ಇಬ್ರಾಹಿಂ ಸಫರ್ ಮತ್ತು ಇಬ್ರಾಹಿಂ ಮಾರ್ಸಾನಾ ಮೆರವಣಿಗೆಗೆ ನೇತೃತ್ವ ನೀಡಿದರು.
ಚಿತ್ರ ಮಾಹಿತಿ 1) ಖಾಸಗಿ ಬಸ್‍ಗಳ ಸಾಂಕೇತಿಕ ಮುಷ್ಕರದ ಪೂರ್ವಭಾವಿಯಾಗಿ ಬಸ್‍ಮಾಲಿಕರು, ಸಿಬ್ಬಂದಿ ಹಾಗೂ ಕುಟುಂಬದರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
2) ಖಾಸಗಿ ಬಸ್ ಮುಷ್ಕರದಿಂದ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

