HEALTH TIPS

ಇಂದಿನಿಂದ ಶ್ರೀಎಡನೀರು, ಕೊಂಡೆವೂರು ಶ್ರೀಗಳ ಚಾತುರ್ಮಾಸ್ಯ ವ್ರತಾಚಣೆ

ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಹಾಗೂ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಎರಡು ತಿಂಗಳ ಕಾಲ ನಡೆಯಲಿರುವ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29ರಂದು ಆರಂಭಗೊಂಡು, ಸೆ. 26ರ ವರೆಗೆ ಜರುಗಲಿದೆ,

ಶ್ರೀಎಡನೀರು ಮಠಾಧೀಶರ ಆರನೇ ವರ್ಷದ ಹಾಗೂ ಕೊಂಡೆವೂರು ಶ್ರೀಗಳ 23ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ನಡೆದುಬರಲಿದ್ದು, ಚಾತುರ್ಮಾಸ್ಸಯ ಪೂರ್ವಭಾವಿಯಾಗಿ ಶ್ರೀ ಅಜ್ಜಾವರ ದೇವಸ್ಥಾನ,  ಶ್ರೀ ಮದೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಶ್ರೀ ಅನಂತಪುರ ದೇವಸ್ಥಾನ, ಶ್ರೀ ಕಡುಮನ ದೇವಸ್ಥಾನ ಹಾಗೂ ಶ್ರೀಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

 ಉಭಯಶ್ರೀಗಳು ಅವರ ಮಠಗಳಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳಲಿದ್ದಾರೆ. ಪ್ರತಿದಿನ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ನಡೆಯಲಿರುವುದು. ಶ್ರೀಎಡನೀರು ಮಠದಲ್ಲಿ ಎರಡು ತಿಂಗಳ ಕಾಲ ನಡೆಯಲಿರುವ ಸಾಂಸ್ಕøತಿಕ ಉತ್ಸವವನ್ನು ಜುಲೈ 29ರಂದು ಬೆಳಗ್ಗೆ 10ಕ್ಕೆ  ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ  ಕಾರ್ಯಕ್ರಮ ಉದ್ಘಾಟಿಸುವರು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. 

ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ 23ನೇ ಚಾತುರ್ಮಾಸ್ಯ ವ್ರತ ಸಂಕಲ್ಪ ಜುಲೈ 29ರಂದು ಗುರುಪೂರ್ಣಿಮೆಯಂದು ನಡೆಯಲಿದೆ. ¨ಳಗ್ಗೆ ಗಣಹೋಮ, ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ, ವಿಶೇಷ ಸೀಯಾಳಾಭಿಷೇಕ ಬಳಿಕ ವ್ಯಾಸ ಪೂಜೆ, ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಹಾಪೂಜೆಯ ನಂತರ ಶ್ರೀ ಗುರುವಾದನಾ ಪೂಜೆ. ಚಾತುರ್ಮಾಸ್ಯ ಸಂದೇಶ ನೀಡಿ ಶ್ರೀಗಳು ಅನುಗ್ರಹಿಸುವರು. ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಯಜ್ಞ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.


ಚಿತ್ರ: ಎರಡು ತಿಂಗಳ ಕಾಲ ನಡೆಯಲಿರುವ ಚಾತುರ್ಮಾಸ್ಯದ ಪೂರ್ವಭಾವಿಯಾಗಿ ಶ್ರೀ ಅಜ್ಜಾವರ ದೇವಸ್ಥಾನಕ್ಕೆ ಭೇಟಿನೀಡಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries