ಮುಳ್ಳೇರಿಯ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕಾರಡ್ಕ ಪಂಚಾಯತಿ ಕುಟುಂಬ ಸಂಗಮ ಮುಳ್ಳೇರಿಯದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಪಂಚಾಯತಿ ಸಮಿತಿ ಅಧ್ಯಕ್ಷ ಸಿ.ಕೆ. ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿಚಾರ ಕೇಂದ್ರ ಸ್ಥಾನೀಯ ಸಮಿತಿ ಕಾರ್ಯದರ್ಶಿ ಸೂರಜ್, ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಜನನಿ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್, ಪಂಚಾಯತಿ ಸದಸ್ಯರಾದ ಸವಿತ, ಪ್ರಶಾಂತ್, ವಲಯ ಅಧ್ಯಕ್ಷ ಸದಾಶಿವ ಮೊದಲಾದವರು ಮಾತನಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ. ರಾಘವನ್ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪ್ಲಸ್‍ಟು ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಗೌರವಿಸಲಾಯಿತು. ವಿವಿಧ ಕಲಾ, ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಪಂಚಾಯತಿ ಸಮಿತಿ ಕಾರ್ಯದರ್ಶಿ ಅಪ್ಪೋಜಿ ರಾವ್ ಸ್ವಾಗತಿಸಿ, ಕೋಶಾಧಿಕಾರಿ ದೇವಿಪ್ರಸಾದ್ ವಂದಿಸಿದರು.

.jpg)
