HEALTH TIPS

ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆಯಂಡಿ ಬರ್ನ್‌ಹ್ಯಾಮ್‌

 ಲಂಡನ್‌: ಲೇಬರ್‌ ಪಕ್ಷದ ನಾಯಕ ಆಯಂಡಿ ಬರ್ನ್‌ಹಮ್‌ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. 


ಕಿಯರ್‌ ಸ್ಟಾರ್ಮರ್ ಅವರು ಪ್ರಧಾನಿ ಹುದ್ದೆ ಮತ್ತು ಲೇಬರ್‌ ಪಕ್ಷದ ನಾಯಕನ ಸ್ಥಾನಕ್ಕೆ ಜೂನ್‌ 21ರಂದು ರಾಜೀನಾಮೆ ಘೋಷಿಸಿದ್ದರು. ಒಂದು ತಿಂಗಳ ಅಂತರದಲ್ಲಿಯೇ ನೂತನ ಪ್ರಧಾನಿಯ ನೇಮಕಗೊಂಡಿದೆ.

ಸೋಮವಾರ ಬೆಳಿಗ್ಗೆ ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ರಾಜ ಚಾರ್ಲ್ಸ್‌-3 ಅವರನ್ನು ಭೇಟಿಯಾಗಿ ಸ್ಟಾರ್ಮರ್‌ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ನೂತನ ಪ್ರಧಾನಿ ಆಯ್ಕೆ ದಾರಿ ಸುಗಮಗೊಂಡಿತು.

10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಭಾಷಣ ಮಾಡಿದ ಆಯಂಡಿ ಬರ್ನ್‌ಹಮ್‌ ಅವರು, 'ಸಮಸ್ಯೆ ಪರಿಹಾರದ ಕುರಿತಂತೆ ಎಲ್ಲರೂ ರಾಜಕೀಯ ಮಾಡುತ್ತಾರೆ. ಆದರೆ, ನಾನು ದೇಶವನ್ನು ಈಗಿನ ಸ್ಥಿತಿಯಲ್ಲಿ ದೇಶವನ್ನು ಸುರಕ್ಷತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ' ಎಂದು ಭರವಸೆ ನೀಡಿದರು.

ಹಿಂದಿನ ಉತ್ತರಾಧಿಕಾರಿಗಳು ಆಡಳಿತ ಸೌಧದಿಂದಲೇ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಯಂಡಿ ಅವರು, 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಭಾಷಣ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

'ಬ್ರಿಟನ್‌ ಅನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸುತ್ತೇವೆ. ಕಳೆದ 40 ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಬದಲಾವಣೆಯನ್ನು ತರಲಿದ್ದು, ಹೊಸ ರಾಜಕೀಯ ಹಾಗೂ ಆರ್ಥಿಕ ಮಾದರಿಯನ್ನು ದೇಶದಲ್ಲಿ ಪರಿಚಯಿಸಲಿದ್ದೇವೆ' ಎಂದು ಹೇಳಿದರು.

ಪತ್ನಿ ಮೇರಿ ಫ್ರಾನ್ಸ್‌ ವ್ಯಾನ್‌ ಹೀಲ್‌ ಜೊತೆಗೂಡಿ ಡೌನಿಂಗ್‌ ಸ್ಟ್ರೀಟ್‌ಗೆ ಬಂದ ಆಯಂಡಿ ಅವರನ್ನು ಹಲವು ಸಹೋದ್ಯೋಗಿಗಳು ಕೂಡ ಸುತ್ತುವರಿದಿದ್ದರು. ಈ ಪೈಕಿ ಕೆಲವರನ್ನು ನೂತನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆಯಿದೆ.

'ಬೀದಿಯಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಹೆಚ್ಚಿನ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು' ಎಂದು ಚೊಚ್ಚಲ ಭಾಷಣದಲ್ಲಿಯೇ ತಿಳಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries