ಕಾಸರಗೋಡು: ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿರುವ ರಸ್ತೆಗಳಲ್ಲಿ ಬೆಳಗ್ಗೆ 8 ರಿಂದ 10 ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ ಸಂಜೆ 5ರ ವರೆಗೆ ಟಿಪ್ಪರ್ ಲಾರಿಗಳು ಮತ್ತು ಟಾಪ್ಪಿಂಗ್ ಮೆಕ್ಯಾನಿಸಂ ಹೊಂದಿರುವ ಇತರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಆದೇಶ ಹೊರಡಿಸಿದ್ದಾರೆ.

