HEALTH TIPS

ಮನೆಯ ಹೊರಗಿನ ಗುಪ್ತ ಸ್ಥಳದಲ್ಲಿದ್ದ ಕೀಲಿಕೈ ಬಳಸಿ ಬಾಗಿಲು ತೆರೆದು 110 ಗ್ರಾಂ ಚಿನ್ನ, 20 ಸಾವಿರ ನಗದು ಕಳವು-ದೂರು

ಉಪ್ಪಳ: ಪೈವಳಿಕೆ ಕುರುಡಪದವಿನಲ್ಲಿ ಮನೆ ಹೊರಗೆ ಗುಪ್ತ ಸ್ಥಳದಲ್ಲಿರಿಸಿದ್ದ ಕೀಲಿಕೈ ಬಳಸಿ ನುಗ್ಗಿದ್ದ ಕಳ್ಳರು,  110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಇಲ್ಲಿನ ನಿವಾಸಿ ಸುಬ್ರಾಯ ಸಾಯ ಎಂಬವರ ದೂರಿನನ್ವಯ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜು. 9ರಿಂದ 13ರ ಮಧ್ಯೆ ಕಳವು ನಡೆದಿದೆ. 


ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ, ಕಾಲೇಜಿಗೆ ತೆರಳಿದ್ದ ಸಮಯದಲ್ಲಿ ಈ ಕಳವು ನಡೆದಿದೆ.   ಸುಬ್ರಾಯ ಹಾಗೂ ಪತ್ನಿ ಮಾರ್ಚ್ 9ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದರ್ಶನಕ್ಕಾಗಿ ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಕ್ಕಳು ಮಾತ್ರವೇ ಇದ್ದರು. ಹಿರಿಯ ಮಗ ಕಾಲೇಜಿಗೆ ಹಾಗೂ ಕಿರಿಯ ಮಕ್ಕಳು ಪೈವಳಿಕೆ ಶಾಲೆಗೆ ತೆರಳಿದ್ದರು. ಈ ಹೊತ್ತಿನಲ್ಲಿ ಮನೆಯ ಹೊರಗೆ ಗುಪ್ತ ಸ್ಥಳವೊಂದರಲ್ಲಿ ಕೀಲಿಕೈ ಇರಿಸಿದ್ದರು. ಅಲ್ಲಿಂದ ಕೀಲಿ ಕೈ ತೆಗೆದ ಕಳ್ಳರು ಕೃತ್ಯವೆಸಗಿದ್ದಾರೆ. ಕಪಾಟಿನಲ್ಲಿರಿಸಿದ್ದ ವಜ್ರದ ನೆಕ್ಲೇಸ್, ಚಿನ್ನದ ಬಳೆ, ಬೆಂಡೋಲೆ, ಉಂಗುರ, ಮಾಲೆ ಒಳಗೊಂಡ ಆಭರಣ  ಹಾಗೂ 20 ಸಾವಿರ ರೂ. ನಗದು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಕಳವಿಗೆ ಸಂಬಂಧಿಸಿ ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಸಂಶಯವಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries