HEALTH TIPS

ನಿಲ್ಲಿಸಿದ್ದ ಆಟೋಗಳಿಂದ ಹಣ ಕಳವು-ಆರೋಪಿ ಬಂಧನ

ಕಾಸರಗೋಡು: ನಿಲುಗಡೆಗೊಳಿಸಿದ್ದ ಆಟೋ ರಿಕ್ಷಾಗಳಿಂದ ಕಳವು ನಡೆಸುತ್ತಿದ್ದಾತನನ್ನು ಪೆÇಲೀಸರು ಕೈಯಾರೆ ಸೆರೆಹಿಡಿದಿದ್ದಾರೆ. ಚಿತ್ತಾರಿಕಲ್ ನಿವಾಸಿ ಶೈಜು ಜೋಸೆಫ್ (34)ಎಂಬಾತನನ್ನು ತಲಶ್ಶೇರಿ ಪೆÇಲೀಸರು ಬಂಧಿಸಿದ್ದಾರೆ. 


ಆಟೋ ರಿಕ್ಷಾಗಳನ್ನು ಸ್ಟ್ಯಾಂಡ್‍ನಲ್ಲಿ ನಿಲ್ಲಿಸಿ ಚಾಲಕರು ಹೊರಗೆ ತೆರಳಿದ ಸಂದರ್ಭದಲ್ಲಿ ಆಟೋರಿಕ್ಷಾಗಳಿಂದ ಶೈಜು ಜೋಸೆಫ್ ಕಳ್ಳತನ ಮಾಡುತ್ತಿದ್ದ ಬಗ್ಗೆ ಹಲವರಿಂದ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದರು.

ಜುಲೈ 8ರಂದು ತಲಶ್ಶೇರಿ ಹಳೇ ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ 8 ಸಾವಿರ ರೂಪಾಯಿ ನಗದು ಕಳವು ನಡೆಸಿದ್ದು. ಈ ಬಗ್ಗೆ ಲಭಿಸಿದ ದೂರಿನಂತೆ ಸಿಸಿಟಿವಿ ದೃಶ್ಯಗಳನ್ನು ಪೆÇಲೀಸರು ಪರಿಶೀಲಿಸಿದಾಗ ಕಳ್ಳನ ದೃಶ್ಯ ಪತ್ತೆಯಾಗಿದ್ದು, ತನಿಖೆ ನಡೆಸುವ ವೇಳೆ ಮತ್ತೆ ಕಳ್ಳತನಕ್ಕೆ ತಲುಪಿದ ಶೈಜು ಜೋಸೆಫ್‍ನನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.

ಈತನ ವಿರುದ್ಧ ಕಾಸರಗೋಡು, ಕಣ್ಣೂರು ಜಿಲ್ಲೆಗಳಾಗಿ 17ಕ್ಕೂ ಹೆಚ್ಚು ಕೇಸುಗಳಿವೆ. ಕಳವು ನಡೆಸುವ ಹಣವನ್ನು ಬಳಸಿ ಪ್ರಿಯತಮೆಯೊಂದಿಗೆ ಸುತ್ತಾಡುವುದು ಈತನ ಹವ್ಯಾಸವಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries