HEALTH TIPS

ಪಾಸ್‌ಪೋರ್ಟ್ ವಿದೇಶ ಪ್ರಯಾಣಕ್ಕೆ ದಾಖಲೆಯಷ್ಟೇ, ಪೌರತ್ವ ಪುರಾವೆಯಲ್ಲ: ಎಂಇಎ

ನವದೆಹಲಿ: ಪಾಸ್‌ಪೋರ್ಟ್ ಎನ್ನುವುದು ಭಾರತೀಯ ನಾಗರಿಕರು ದೇಶದಿಂದ ನಿರ್ಗಮಿಸುವುದನ್ನು ನಿಯಂತ್ರಿಸಲು ಸರ್ಕಾರವು ನೀಡುವ ದಾಖಲೆಯಷ್ಟೇ, ಅದು ಪೌರತ್ವದ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ವೇಳೆ ಭಾರತೀಯರು ಪೌರತ್ವವನ್ನು ದೃಢೀಕರಿಸಲು ಪಾಸ್‌ಪೋರ್ಟ್ ಅನ್ನು ಬಳಸಬಹುದೇ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಎಂಇಎ ಈ ಹೇಳಿಕೆ ನೀಡಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, '1967ರ ಪಾಸ್‌ಪೋರ್ಟ್‌ ಕಾಯ್ದೆಯ ಪ್ರಕಾರ, ಭಾರತೀಯ ಪಾಸ್‌ಪೋರ್ಟ್‌ ಸರ್ಕಾರವು ದೇಶದ ನಾಗರಿಕರಿಗೆ ವಿದೇಶ ಪ್ರಯಾಣಕ್ಕೆಂದು ನೀಡುವ ದಾಖಲೆಯಷ್ಟೇ' ಎಂದು ಹೇಳಿದ್ದಾರೆ.

ನಿಗದಿತ ಪ್ರಕ್ರಿಯೆಯ ಅನ್ವಯ ಸೂಕ್ತ ಪರಿಶೀಲನೆಯ ನಂತರವೇ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ. ಪ್ರಸ್ತುತ ಶೇ. 8ಕ್ಕಿಂತ ಕಡಿಮೆ ಭಾರತೀಯರು ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜೂನ್‌ 24ರಂದು ಪಾಸ್‌ಪೋರ್ಟ್‌ ಸೇವಾ ದಿವಸ್ ಕಾರ್ಯಕ್ರಮದ ವೇಳೆ ಎಂಇಎ ಹಿರಿಯ ಅಧಿಕಾರಿಗಳು, 'ಪಾಸ್‌ಪೋರ್ಟ್‌ ಕೇವಲ ವಿದೇಶ ಪ್ರಯಾಣದ ದಾಖಲೆಯಷ್ಟೇ, ದೇಶದ ಪೌರತ್ವದ ಪುರಾವೆಯಲ್ಲ' ಎಂದು ಹೇಳಿದ್ದರು. ನಂತರ, ಈ ಹೇಳಿಕೆಯು ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ಈ ಕುರಿತು ಕೇಂದ್ರ ಸರ್ಕಾರ ಮತ್ತು ಎಂಇಎ ಅನ್ನು ಪ್ರಶ್ನಿಸಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries