ವಿಶ್ವಸಂಸ್ಥೆ: 'ಭಯೋತ್ಪಾದಕ ಭಯೋತ್ಪಾದಕನೇ..' ಹತ್ಯೆಗೈಯುವ ಸಿದ್ಧಾಂತವನ್ನು ಬೇರು ಸಮೇತ ಕಿತ್ತೊಗೆಯಲು ಅಂತರರಾಷ್ಟ್ರೀಯ ಸಮುದಾಯವು ಕೈ ಜೋಡಿಸಬೇಕು. ಭಯೋತ್ಪಾದನೆಯನ್ನು ಸಮರ್ಥಿಸಲು ಯಾವುದೇ ಕಾರಣ ಇರಬಾರದು' ಎಂದು ಭಾರತ ಕರೆ ನೀಡಿದೆ.
'ಗಡಿಯಾಚೆಗಿನ ಭಯೋತ್ಪಾದನೆಯಿಂದ ದಶಕಗಳಿಂದ ಭಾರತವು ನಲುಗುತ್ತಿದೆ.
ಭಯೋತ್ಪಾದನೆಯಿಂದ ನಮ್ಮ ದೇಶದ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಅಪಾರ ಬೆಲೆ ತೆತ್ತಿದ್ದಾರೆ. ಇದರಿಂದ ಇಡೀ ಸಮಾಜವೇ ಛಿದ್ರಗೊಂಡಿದೆ. ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ತಿಳಿಸಿದ್ದಾರೆ.
'ಯಾವುದೇ ಕೊರತೆ, ರಾಜಕೀಯ ಕಾರಣವೇ ಇರಲಿ. ಎಲ್ಲ ಮಾದರಿಯ ಭಯೋತ್ಪಾದನನೆಯನ್ನು ನಿಸ್ಸಂದೇಹವಾಗಿ ಖಂಡಿಸಬೇಕು' ಎಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಕರೆ ನೀಡಿದ್ದಾರೆ.

