HEALTH TIPS

ಹೊಸ ಇಪಿಎಫ್‌ ಸ್ಕೀಮ್‌ 2026 ಜಾರಿ, ಉದ್ಯೋಗಿಗಳ ಮೇಲೇನು ಪರಿಣಾಮ? ಬದಲಾಯ್ತು PF ಕಡಿತ, ವಿತ್‌ಡ್ರಾ ರೂಲ್ಸ್!

ನವದೆಹಲಿ: ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದಲ್ಲಿದ್ದ ಹಳೇ ಪಿಎಫ್ ನಿಯಮಗಳು ಈಗ ಇತಿಹಾಸ ಸೇರಿವೆ. ಕೇಂದ್ರ ಸರ್ಕಾರವು ಕೋಡ್ ಆನ್ ಸೋಶಿಯಲ್ ಸೆಕ್ಯೂರಿಟಿ 2020 ಕಾಯ್ದೆಯ ಅಡಿಯಲ್ಲಿ ಹೊಸ ಹೊಸ ಇಪಿಎಫ್‌ ಸ್ಕೀಮ್ 2026 ಅನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಎಂಪ್ಲಾಯೀಸ್ ಪೆನ್ಷನ್ ಸ್ಕೀಮ್ 2026 (EPS 2026) ಹಾಗೂ ಎಂಪ್ಲಾಯೀಸ್ ಡಿಪಾಸಿಟ್-ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ 2026 ಅನ್ನು ಕೂಡ ಜೂನ್ 29, 2026 ರಂದು ಅಧಿಕೃತ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಇದರೊಂದಿಗೆ ಸರ್ಕಾರವು ಎಂಪ್ಲಾಯೀಸ್ ಎನ್‌ರೋಲ್‌ಮೆಂಟ್ ಕ್ಯಾಂಪೇನ್ 2026, ವಿಶ್ವಾಸ್ 2026 ಮತ್ತು ಅಮ್ನೆಸ್ಟಿ 2026ನಂತಹ ವಿಶೇಷ ಯೋಜನೆಗಳನ್ನು ಕೂಡ ಪರಿಚಯಿಸಿದೆ. ಈಗಾಗಲೇ ಪಿಎಫ್ ಖಾತೆ ಹೊಂದಿರುವ ಚಂದಾದಾರರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಹಳೆಯ ಯೋಜನೆಯ ಸದಸ್ಯರು ಯಾವುದೇ ಹೆಚ್ಚುವರಿ ನೋಂದಣಿ ಅಥವಾ ಫಾರ್ಮಾಲಿಟಿಗಳಿಲ್ಲದೆ ಸ್ವಯಂಚಾಲಿತವಾಗಿ ಹೊಸ ವ್ಯವಸ್ಥೆಗೆ ವರ್ಗಾವಣೆಯಾಗುತ್ತಾರೆ. ಅವರ ಪಿಎಫ್ ಖಾತೆಯಲ್ಲಿರುವ ಹಳೆಯ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಸಂಬಳದಿಂದ ಪಿಎಫ್‌ ಕಟ್ ಆಗೋದು ಹೇಗೆ?

ಈಗ ಎಲ್ಲರಿಗೂ ಇರೋ ದೊಡ್ಡ ಪ್ರಶ್ನೆ ಅಂದ್ರೆ, ಪಿಎಫ್ ಕಾಂಟ್ರಿಬ್ಯೂಷನ್ ಎಷ್ಟು ಕಟ್ ಆಗುತ್ತೆ ಅನ್ನೋದು. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ತಮ್ಮ ವೇತನದ ಶೇಕಡಾ 12ರಷ್ಟು ಹಣವನ್ನು ಪಿಎಫ್‌ಗೆ ಕಾಂಟ್ರಿಬ್ಯೂಟ್ ಮಾಡಬೇಕಾಗುತ್ತೆ. ಆದರೆ ಇಲ್ಲೊಂದು ಪ್ರಮುಖ ಬದಲಾವಣೆಯನ್ನು ಸರ್ಕಾರ ಸ್ಪಷ್ಟಪಡಿಸಿದೆ. ಪಿಎಫ್ ಕಟ್ ಮಾಡಲು ಇರೋ ಕಡ್ಡಾಯ ವೇತನದ ಮಿತಿ ಸದ್ಯಕ್ಕೆ ತಿಂಗಳಿಗೆ 15,000 ರೂಪಾಯಿಗಳು.

ಇದರ ಅರ್ಥ, ನಿಮ್ಮ ಕಂಪಲ್ಸರಿ ಪಿಎಫ್ ಕಾಂಟ್ರಿಬ್ಯೂಷನ್ ಈ 15,000 ರೂಪಾಯಿಯ 12 ಪರ್ಸೆಂಟ್‌ಗೆ ಅಂದ್ರೆ 1,800 ರೂಪಾಯಿಗೆ ಮಾತ್ರ ಸೀಮಿತವಾಗಿರುತ್ತದೆ. ನಿಮ್ಮ ಮಾಲೀಕರು ಕೂಡ ಅಷ್ಟೇ ಮೊತ್ತವನ್ನು ಹಾಕಬೇಕಾಗುತ್ತೆ. ಆದರೆ, ಒಂದು ವೇಳೆ ನಿಮ್ಮ ಸಂಬಳ 15,000 ಕ್ಕಿಂತ ಹೆಚ್ಚಿಗೆ ಇದ್ದರೆ, ನೀವು ಹೆಚ್ಚು ಹಣವನ್ನು ಪಿಎಫ್‌ನಲ್ಲಿ ಉಳಿತಾಯ ಮಾಡಲು ಬಯಸಿದರೆ ಅದಕ್ಕೆ ಅವಕಾಶವಿದೆ. ಅದನ್ನು ವಾಲೆಂಟರಿ ಕಾಂಟ್ರಿಬ್ಯೂಷನ್ ಅಂದ್ರೆ ಸ್ವಯಂಪ್ರೇರಿತ ಕೊಡುಗೆ ಎಂದು ಕರೆಯಲಾಗುತ್ತದೆ.

ಇದರ ದೊಡ್ಡ ಪ್ಲಸ್ ಪಾಯಿಂಟ್ ಏನೆಂದರೆ, ಮುಂದೊಂದು ದಿನ ನಿಮ್ಮ ಹಣಕಾಸಿನ ಅಗತ್ಯಗಳು ಬದಲಾದರೆ, ಈ ಹೆಚ್ಚುವರಿ ವಾಲೆಂಟರಿ ಪಿಎಫ್ ಹಣವನ್ನು ನೀವು ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು.. ಫಾರ್‌ ಎಕ್ಸಾಂಪಲ್‌ ನೋಡೋದಾದ್ರೆ, ನಿಮ್ಮ ಸಂಬಳ ತಿಂಗಳಿಗೆ 80,000 ರೂಪಾಯಿ ಇದೆ ಅಂದುಕೊಳ್ಳಿ. ನೀವು ರಿಟೈರ್ಮೆಂಟ್‌ಗಾಗಿ ಹೆಚ್ಚಿನ ಹಣ ಉಳಿಸಲು ಪೂರ್ತಿ ಸಂಬಳದ ಮೇಲೆ ಪಿಎಫ್ ಕಟ್ ಮಾಡಲು ಆಪ್ಷನ್ ತಗೊಂಡಿರ್ತೀರಾ. ಆದರೆ ಕೆಲವು ವರ್ಷಗಳ ನಂತರ ನೀವು ಹೋಮ್ ಲೋನ್ ತಗೊಳ್ತೀರಾ ಮತ್ತು ನಿಮಗೆ ಕೈಯಲ್ಲಿ ಹೆಚ್ಚಿನ ಹಣ ಬೇಕಾಗುತ್ತೆ. ಇಂತಹ ಸಮಯದಲ್ಲಿ, ನೀವು ಈ ಹೆಚ್ಚುವರಿ ವಾಲೆಂಟರಿ ಪಿಎಫ್ ಕಟ್ ಮಾಡಿಸೋದನ್ನ ಕಮ್ಮಿ ಮಾಡಬಹುದು ಅಥವಾ ಸ್ಟಾಪ್ ಮಾಡಬಹುದು. ಈ ಹೆಚ್ಚಿನ ಫ್ಲೆಕ್ಸಿಬಿಲಿಟಿ ಹೊಸ ಸ್ಕೀಮ್‌ನ ಅತ್ಯಂತ ದೊಡ್ಡ ಹೈಲೈಟ್ ಆಗಿದೆ. ಆದರೆ, ನೆನಪಿಡಿ, ಪಿಎಫ್‌ಗೆ ನೀವು ಹೆಚ್ಚುವರಿ ಕೊಡುಗೆ ನೀಡಿದಾಗ, ನಿಮ್ಮ ಮಾಲೀಕರು ಕೂಡ ಅದಕ್ಕೆ ಸಮನಾದ ಮ್ಯಾಚಿಂಗ್ ಕಾಂಟ್ರಿಬ್ಯೂಷನ್ ನೀಡಲೇಬೇಕು ಅಂತ ನಿಯಮವಿಲ್ಲ, ಅದು ಕಂಪನಿಯ ಪಾಲಿಸಿ ಅಥವಾ ಅಗ್ರಿಮೆಂಟ್ ಮೇಲೆ ಡಿಪೆಂಡ್ ಆಗಿರುತ್ತೆ.

ಹಣ ವಿತ್‌ಡ್ರಾ ಮಾಡೋಕೆ ಹೊಸ ರೂಲ್ಸ್!

ಇನ್ನು ಉದ್ಯೋಗಿಗಳಿಗೆ ಅತ್ಯಂತ ಮುಖ್ಯವಾದ ಮತ್ತೊಂದು ವಿಷಯ ಅಂದ್ರೆ ಪಿಎಫ್ ಹಣವನ್ನು ಅರ್ಧದಲ್ಲೇ ವಿತ್‌ಡ್ರಾ ಮಾಡಿಕೊಳ್ಳೋದು ಅಲ್ವಾ? ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಹಣ ನಮಗೆ ಸಹಾಯಕ್ಕೆ ಬರುತ್ತೆ. ಹೊಸ EPF ಸ್ಕೀಮ್ 2026 ರಲ್ಲಿ ವಿತ್‌ಡ್ರಾವಲ್ ನಿಯಮಗಳನ್ನು ತುಂಬಾ ಸಿಂಪಲ್‌ ಮಾಡಲಾಗಿದೆ.. ಮೊದಲೆಲ್ಲಾ ಹತ್ತಾರು ಕ್ಯಾಟಗರಿಗಳಿದ್ದವು, ಆದರೆ ಈಗ ಅವುಗಳನ್ನು ಕೇವಲ ಮೂರು ಪ್ರಮುಖ ಗುಂಪುಗಳಾಗಿ ವಿಂಗಡಿಸಲಾಗಿದೆ. ಆದರೆ, ಇಲ್ಲಿ ನೀವು ಗಮನಿಸಬೇಕಾದ ಒಂದು ಅತ್ಯಂತ ಪ್ರಮುಖ ನಿಯಮ ಬಂದಿದೆ. ನೀವು ಎಷ್ಟೇ ತುರ್ತು ಪರಿಸ್ಥಿತಿಯಲ್ಲಿದ್ರೂ, ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್‌ನಲ್ಲಿ ಕನಿಷ್ಠ ಶೇ. 25ರಷ್ಟು ಹಣವನ್ನು ಅಕೌಂಟ್‌ನಲ್ಲೇ ಉಳಿಸಿಕೊಳ್ಳಬೇಕು. ಉಳಿದ ಶೇ. 75ರಷ್ಟು ಹಣವನ್ನು ಮಾತ್ರ ವಿತ್‌ಡ್ರಾ ಮಾಡಲು ಸಾಧ್ಯ. ಇದನ್ನು ಎಲಿಜಿಬಲ್ ಮೆಂಬರ್ ಬ್ಯಾಲೆನ್ಸ್ ಎಂದು ಕರೆಯಲಾಗುತ್ತದೆ. ಅಂದರೆ ನೀವು ಇನ್ನು ಮುಂದೆ ಪೂರ್ತಿ ಹಣವನ್ನು ಖಾಲಿ ಮಾಡಲು ಬರೋದಿಲ್ಲ, ಭವಿಷ್ಯದ ಭದ್ರತೆಗಾಗಿ ಶೇ. 25ರಷ್ಟು ಬ್ಯಾಲೆನ್ಸ್ ಇರಲೇಬೇಕು. ಜೊತೆಗೆ, ನೀವು ಹಳೇ ಸ್ಕೀಮ್ ಅಡಿಯಲ್ಲಿ ಎಷ್ಟು ಬಾರಿ ವಿತ್‌ಡ್ರಾ ಮಾಡಿದ್ದರೂ, ಆ ಹಳೇ ಲಿಮಿಟ್‌ಗಳು ಈಗ ಲೆಕ್ಕಕ್ಕೆ ಬರೋದಿಲ್ಲ. ಹೊಸ ಸ್ಕೀಮ್ ಅಡಿಯಲ್ಲಿ ಹೊಸದಾಗಿ ನಿಮ್ಮ ಲಿಮಿಟ್ ಕೌಂಟ್ ಸ್ಟಾರ್ಟ್ ಆಗುತ್ತೆ.

ವಿತ್‌ಡ್ರಾ ವೇಳೆ ಬರುವ 3 ಕ್ಯಾಟಗರಿಗಳು

  1. ಅಗತ್ಯ ಸಂದರ್ಭಗಳು
  2. ಮನೆಗೆ ಸಂಬಂಧಿಸಿದ ಸಂದರ್ಭಗಳು
  3. ವಿಶೇಷ ಸಂದರ್ಭಗಳು

ಯಾವ ಟೈಮ್‌ನಲ್ಲಿ, ಎಷ್ಟು ವಿತ್‌ಡ್ರಾ ಮಾಡಬಹುದು?

ಯಾವಾಗ ಮತ್ತು ಎಷ್ಟು ವಿತ್‌ಡ್ರಾ ಮಾಡಬಹುದು ಅನ್ನೋ ಕಂಪ್ಲೀಟ್ ಡೀಟೇಲ್ಸ್ ಅನ್ನು ಮುಂದೆ ನೋಡ್ತಾ ಹೋಗೋಣ ಬನ್ನಿ..

  1. ಮೊದಲನೇಯದಾಗಿ ಸ್ವಂತ ಅಥವಾ ಕುಟುಂಬದವರ ಅನಾರೋಗ್ಯದ ಕಾರಣಕ್ಕೆ ನೀವು ಪಿಎಫ್‌ ಹಣವನ್ನು ತೆಗೆಯಬಹುದು. ಇಲ್ಲಿ ನಿಮ್ಮ ಪಿಎಫ್ ಅಕೌಂಟ್ ಕ್ರಿಯೇಟ್ ಆಗಿ ಕನಿಷ್ಠ 12 ತಿಂಗಳುಗಳಾಗಿರಬೇಕು. ನೀವು ಎಲಿಜಿಬಲ್ ಮೆಂಬರ್ ಬ್ಯಾಲೆನ್ಸ್‌ನ ಶೇ. 100ರಷ್ಟು ವರೆಗೂ ಹಣ ಪಡೆಯಬಹುದು. ಇದಕ್ಕೆ ಇಷ್ಟೇ ಬಾರಿ ಪಡೆಯಬೇಕು ಎಂಬ ಯಾವುದೇ ನಿರ್ದಿಷ್ಟ ಲಿಮಿಟ್ ಇರೋದಿಲ್ಲ.
  2. ಎರಡನೇಯದು ಶಿಕ್ಷಣ ಸ್ವಂತ ಅಥವಾ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪಿಎಫ್‌ ಹಣವನ್ನು ತೆಗೆಯಬಹುದು.. 12 ತಿಂಗಳ ಮೆಂಬರ್‌ಶಿಪ್ ಇದ್ದರೆ ಸಾಕು, ಎಲಿಜಿಬಲ್ ಬ್ಯಾಲೆನ್ಸ್‌ನ 100% ಪಡೆಯಬಹುದು. ಉದ್ಯೋಗದ ಅವಧಿಯಲ್ಲಿ ಗರಿಷ್ಠ 10 ಬಾರಿ ಈ ರೀತಿ ಹಣ ವಿತ್‌ಡ್ರಾ ಮಾಡಬಹುದು.
  3. ಮೂರನೇಯದು ಮದುವೆಗಾಗಿ ಪಿಎಫ್‌ ಅಮೌಂಟ್‌ ಡ್ರಾ ಮಾಡಿಕೊಳ್ಳಬಹುದು.. ಸ್ವಂತ ಅಥವಾ ಕುಟುಂಬದವರ ಮದುವೆಗಾಗಿ 12 ತಿಂಗಳ ಮೆಂಬರ್‌ಶಿಪ್ ನಂತರ ಎಲಿಜಿಬಲ್ ಬ್ಯಾಲೆನ್ಸ್‌ನ 100 ಪರ್ಸೆಂಟ್‌ ಹಣವನ್ನು, ನಿಮ್ಮ ಉದ್ಯೋಗಾವಧಿಯಲ್ಲಿ ಗರಿಷ್ಠ 5 ಬಾರಿ ಪಡೆಯಬಹುದು.
  4. ಮನೆ ಖರೀದಿಸಲು ಅಥವಾ ಕಟ್ಟಲು, ಸೈಟ್ ಖರೀದಿ, ಫ್ಲಾಟ್ ಖರೀದಿ, ಹೊಸ ಮನೆ ನಿರ್ಮಾಣ, ಹಳೇ ಮನೆ ರಿಪೇರಿ ಅಥವಾ ಹೋಮ್ ಲೋನ್ ಮರುಪಾವತಿಗಾಗಿ 12 ತಿಂಗಳ ಮೆಂಬರ್‌ಶಿಪ್ ನಂತರ 100 ಪರ್ಸೆಂಟ್ ಎಲಿಜಿಬಲ್ ಬ್ಯಾಲೆನ್ಸ್ ಪಡೆಯಬಹುದು. ಇದಕ್ಕೆ ಗರಿಷ್ಠ 5 ಬಾರಿ ಅವಕಾಶ ಇರಲಿದೆ.
  5. ಇನ್ನು, ಇತರೆ ವಿಶೇಷ ತುರ್ತು ಸಂದರ್ಭಗಳಲ್ಲಿ 12 ತಿಂಗಳ ಮೆಂಬರ್‌ಶಿಪ್ ನಂತರ, ಒಂದು ಫೈನಾನ್ಷಿಯಲ್ ಇಯರ್‌ನಲ್ಲಿ ಗರಿಷ್ಠ 2 ಬಾರಿ 100 ಪರ್ಸೆಂಟ್‌ವರೆಗೂ ಎಲಿಜಿಬಲ್ ಬ್ಯಾಲೆನ್ಸ್ ವಿತ್‌ಡ್ರಾ ಮಾಡಬಹುದು.
  6. ಕೊನೆದಾಗಿ ಉದ್ಯೋಗ ಬಿಟ್ಟಾಗ ಪಿಎಫ್‌ ಅಮೌಂಟ್‌ ಡ್ರಾ ಮಾಡಬಹುದು.. ಒಂದು ವೇಳೆ ನೀವು ಪಿಎಫ್ ಮೆಂಬರ್ ಆಗಿ 12 ತಿಂಗಳು ಮುಗಿಯುವ ಮುನ್ನವೇ ಕೆಲಸ ಬಿಟ್ಟರೆ, ಉದ್ಯೋಗ ಬಿಡುವಾಗ ನಿಮ್ಮ ಅಕೌಂಟ್‌ನಲ್ಲಿರುವ ಪೂರ್ತಿ ಹಣವನ್ನು ಪಡೆಯಬಹುದು. ಇದಕ್ಕೆ ಯಾವುದೇ ಕನಿಷ್ಠ ಅವಧಿಯ ಮಿತಿ ಇರೋದಿಲ್ಲ, ಆದರೆ ಇದು ಸ್ಕೀಮ್‌ನ ಇತರೆ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಅಂದ್ರೇ ಇಲ್ಲಿ ಕನ್ಪೂಸ್‌ ಆಗ್ಬೇಡಿ.. ಎಲಿಜಿಬಲ್‌ ಮೆಂಬರ್‌ ಬ್ಯಾಲೆನ್ಸ್‌ ಅಂದ್ರೇ, ನಿಮ್ಮ ಒಟ್ಟು ಪಿಎಫ್‌ ಉಳಿತಾಯದ ಶೇ. 75ರಷ್ಟು.. ಆ ಹಣವನ್ನು ಸಂಪೂರ್ಣವಾಗಿ ತೆಗಿಬಹುದು.
  7. ಗುತ್ತಿಗೆ ಕಾರ್ಮಿಕರಿಗೆ ಇಪಿಎಫ್‌ಒ ಬಿಗ್ ರಿಲೀಫ್!

    ನಮ್ಮ ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್, ಲಾಜಿಸ್ಟಿಕ್ಸ್, ಕನ್ಸ್ಟ್ರಕ್ಷನ್ ಅಥವಾ ಸೆಕ್ಯೂರಿಟಿ ಸರ್ವಿಸ್‌ಗಳಲ್ಲಿ ಕಾಂಟ್ರಾಕ್ಟ್ ಆಧಾರದ ಮೇಲೆ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಇವರಿಗೆ ಪಿಎಫ್ ಹಣ ಸರಿಯಾಗಿ ಜಮಾ ಆಗಲ್ಲ ಅನ್ನೋ ದೊಡ್ಡ ಕಂಪ್ಲೇಂಟ್ ಇರ್ತಿತ್ತು. ಹೊಸ ಸ್ಕೀಮ್ ಇದಕ್ಕೆ ಕಠಿಣ ನಿಯಮ ತಂದಿದೆ. ಇನ್ಮುಂದೆ ಕಾಂಟ್ರಾಕ್ಟ್ ಏಜೆನ್ಸಿ ಸ್ವತಂತ್ರವಾಗಿ ರಿಜಿಸ್ಟರ್ ಆಗಿಲ್ಲದಿದ್ದರೆ, ಆ ಕಾರ್ಮಿಕರ ಪಿಎಫ್ ಕೊಡುಗೆ ಪಾವತಿಸುವ ಸಂಪೂರ್ಣ ಜವಾಬ್ದಾರಿ ಆಯಾ ಮುಖ್ಯ ಕಂಪನಿಯದ್ದೇ ಆಗಿರುತ್ತದೆ. ಕಾಂಟ್ರಾಕ್ಟರ್ ಪಾವತಿಸುತ್ತಿದ್ದರೂ ಸಹ, ಅಂತಿಮ ಜವಾಬ್ದಾರಿ ಮುಖ್ಯ ಕಂಪನಿಯ ಮೇಲೆಯೇ ಇರುತ್ತದೆ. ಇದರಿಂದ ಕಾಂಟ್ರಾಕ್ಟ್ ಕಾರ್ಮಿಕರ ಪಿಎಫ್ ಹಣ ದುರುಪಯೋಗ ಆಗೋದು ತಪ್ಪುತ್ತದೆ.

    ಇದರ ಜೊತೆಗೆ ಇನ್ಮುಂದೆ ನಿಮ್ಮ ಡಿಜಿಟಲ್ ರೆಕಾರ್ಡ್ಸ್ ಅಪ್ಡೇಟ್ ಆಗಿರೋದು ತುಂಬಾ ಇಂಪಾರ್ಟೆಂಟ್. ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್ ಲಿಂಕ್ ಆಗಿರೋ ಬ್ಯಾಂಕ್ ಅಕೌಂಟ್ ಮತ್ತು ಯುಎಎನ್ ನಂಬರ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿರಬೇಕು. ಇದು ನಿಮ್ಮ ಹಣ ವಿತ್‌ಡ್ರಾ ಪ್ರೊಸೆಸ್ ಸುಲಭಗೊಳಿಸಲು ಮತ್ತು ನೀವು ಕೆಲಸ ಬದಲಾಯಿಸಿದಾಗ ಪಿಎಫ್ ಟ್ರಾನ್ಸ್‌ಫರ್ ಆಗಲು ನೆರವಾಗುತ್ತದೆ. ಇಪಿಎಫ್‌ಒ ಈಗಾಗಲೇ ಹೊಸ ಟೆಕ್ ಅಪ್ಗ್ರೇಡ್ ಮಾಡ್ತಿದ್ದು, ಇ-ಪಾಸ್‌ಬುಕ್ ಸಿಸ್ಟಮ್ ಜೊತೆಗೆ ಬ್ಯಾಂಕ್ ಅಕೌಂಟ್‌ಗಳಿಗೆ ನೇರವಾಗಿ ಇನ್‌ಸ್ಟಂಟ್ ಯುಪಿಐ ವಿತ್ ಡ್ರಾವಲ್ಸ್ ಮಾಡುವ ತಂತ್ರಜ್ಞಾನದ ಟೆಸ್ಟಿಂಗ್ ಕೂಡ ಸದ್ಯದಲ್ಲೇ ಪೂರ್ಣಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries