ನವದೆಹಲಿ: ಪದಾಧಿಕಾರಿಗಳ ನೇಮಕ ಹಾಗೂ ಪಕ್ಷದ ಅಧಿಕೃತ ದಾಖಲೆಗಳಿಗೆ ಸಹಿ ಹಾಕುವವರ ಕುರಿತು ಹಕ್ಕು ಹಾಗೂ ಪ್ರತಿವಾದಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು (ಇ.ಸಿ) ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಎರಡೂ ಬಣಗಳನ್ನು ಕೇಳಿದೆ.
ಮಮತಾ ಬ್ಯಾನರ್ಜಿ ಮತ್ತು ಬಂಡಾಯ ಬಣದ ನಾಯಕ ರುತಬ್ರತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗವು ಈ ಸಂಬಂಧ ಪತ್ರಗಳನ್ನು ಕಳುಹಿಸಿದ್ದು, ಜುಲೈ 6ರಂದು ಸಂಜೆ 5.30ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಳಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

