HEALTH TIPS

ಹಾರ್ಮುಝ್ | ಸ್ಫೋಟಕಗಳಿಗೆ ಢಿಕ್ಕಿಯಾಗಿ ಎರಡು ತೈಲ ಟ್ಯಾಂಕರ್‌ಗಳು ಸ್ಫೋಟ: ವರದಿ

 ಟೆಹರಾನ್ : ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳು ನೆಲಬಾಂಬ್‍ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿವೆ ಎಂದು ಇರಾನ್‍ನ ರೆವಲ್ಯೂಷನರಿ ಗಾಡ್ರ್ಸ್ (ಐಆರ್‍ಜಿಸಿ) ಶನಿವಾರ ತಿಳಿಸಿದ್ದಾರೆ. ಆದರೆ ಈ ಹೇಳಿಕೆಯನ್ನು ಅಮೆರಿಕ ಸೇನೆ ನಿರಾಕರಿಸಿದೆ. 


ಶನಿವಾರ ಬೆಳಗ್ಗೆ, ಅಮೆರಿಕದ ಗುಪ್ತಚರ ಸಂಸ್ಥೆಗಳ ದಾರಿ ತಪ್ಪಿಸುವ ಸೂಚನೆಗಳಿಂದಾಗಿ ಹಾರ್ಮುಝ್ ಜಲಸಂಧಿಯ ದಕ್ಷಿಣದಲ್ಲಿರುವ `ಮೈನ್‍ಫೀಲ್ಡ್' ( ಬಾಂಬ್ ಇರುವ ಪ್ರದೇಶ) ಮೂಲಕ ಹಾದುಹೋಗಲು ಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿವೆ. ನಾವಿಕರು ತಮ್ಮ ಸ್ವತ್ತುಗಳು ಮತ್ತು ಅದಕ್ಕಿಂತ ಮುಖ್ಯವಾಗಿ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು, ಇಂತಹ ವಂಚನೆಗೆ ಒಳಗಾಗಿ ಮೈನ್‍ಫೀಲ್ಡ್ ಪ್ರವೇಶಿಸಬಾರದು ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಇದಲ್ಲದೆ, ಶನಿವಾರ ಭಯೋತ್ಪಾದಕ ಅಮೆರಿಕ ಸೇನೆಯ ಬೆಂಬಲದೊಂದಿಗೆ ನಿಯಮ ಉಲ್ಲಂಘಿಸಿ ನಾಲ್ಕು ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದವು. ಕ್ಷಿಪಣಿ ಮತ್ತು ಡ್ರೋನ್ ಜಂಟಿ ಕಾರ್ಯಾಚರಣೆಯ ಮೂಲಕ ಆ ನಾಲ್ಕೂ ಹಡಗುಗಳನ್ನು ಇದ್ದ ಜಾಗದಲ್ಲೇ ತಡೆಯಲಾಗಿದೆ' ಎಂದು ಐಆರ್‌ಜಿಸಿ ಪ್ರತಿಪಾದಿಸಿದೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ` ಐಆರ್‌ಜಿಸಿʼ ಯ ಬಹುತೇಕ ಹೇಳಿಕೆಗಳಂತೆ ಇದು ಕೂಡ ಸುಳ್ಳು' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries