ತಿರುವನಂತಪುರ: ಎಲ್‌ಡಿಎಫ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳ್ಳಾಡಿಯಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಕುರಿತಂತೆ ಮಾಡಲಾಗಿರುವ ಆರೋಪಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಪಿಣರಾಯಿ ವಿಜಯನ್ ಗುರುವಾರ ತಳ್ಳಿ ಹಾಕಿದರು.
ಮಣ್ಣು ಕುಸಿದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ಸಾರ್ವಜನಿಕವಾಗಿ ಅಹವಾಲು ಆಲಿಕೆ ಸೇರಿ ಎಲ್ಲ ನಿಯಮಗಳನ್ನು ಪಾಲಿಸಿಯೇ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು' ಎಂದರು.
'ಈ ದುರ್ಘಟನೆ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ವಿಜಯನ್ ಟೀಕಿಸಿದರು.
'ವಯನಾಡ್-ಕೋಯಿಕ್ಕೋಡ್ ಸಂಪರ್ಕಿಸುವ ಸುರಂಗ ರಸ್ತೆ ಕಾಮಗಾರಿ ನಿರ್ಣಾಯಕ ಯೋಜನೆಯಾಗಿದೆ. ಮಣ್ಣು ಕುಸಿತ ಘಟನೆಯ ಕಾರಣ ಒಡ್ಡಿ ಈ ಯೋಜನೆಯನ್ನು ಕೈಬಿಡಬಾರದು' ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಆಗ್ರಹಿಸಿದರು.

