HEALTH TIPS

ಫಿಫಾ ವಿಶ್ವಕಪ್: ಸ್ಪೇನ್-ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರ

 ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯವು ಭಾನುವಾರ ಮಧ್ಯರಾತ್ರಿ ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ. 


ಫೈನಲ್ ತಲುಪಲು ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳು ಯಾರ ವಿರುದ್ಧ ಜಯ ಸಾಧಿಸಿವೆ?

ಸೆಮಿಫೈನಲ್ ಪಂದ್ಯಗಳಲ್ಲಿ ಅರ್ಜೆಂಟೀನಾ ತಂಡವು ಇಂಗ್ಲೆಂಡ್ ಅನ್ನು ಮತ್ತು ಸ್ಪೇನ್ ತಂಡವು ಫ್ರಾನ್ಸ್‌ ಅನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಈ ಎರಡೂ ತಂಡಗಳ ನಡುವೆ ಇದುವರೆಗೆ ನಡೆದಿರುವ ಮುಖಾಮುಖಿ ದಾಖಲೆಗಳೇನು?

ಒಟ್ಟಾರೆಯಾಗಿ ಇತ್ತಂಡಗಳು 14 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಎರಡು ಪಂದ್ಯಗಳು ಡ್ರಾ ಆಗಿದ್ದು, ಉಳಿದ ಪಂದ್ಯಗಳಲ್ಲಿ ಸಮಬಲದ ಹೋರಾಟ ಕಂಡುಬಂದಿದೆ.

ವಿಶ್ವಕಪ್ ಇತಿಹಾಸದಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾದದ್ದು ಯಾವಾಗ?

ಈ ಎರಡೂ ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಇದುವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 1966ರಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 2-1 ಗೋಲುಗಳಿಂದ ಗೆದ್ದಿತ್ತು.

ಕೊನೆಯ ಬಾರಿ ಈ ತಂಡಗಳು ಮುಖಾಮುಖಿಯಾಗಿದ್ದು ಯಾವಾಗ?

2018ರ ಮಾರ್ಚ್ 27ರಂದು ನಡೆದ ಸೌಹಾರ್ದ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು 6-1 ಗೋಲುಗಳ ಅಂತರದಿಂದ ಸೋಲಿಸಿತ್ತು.  


ಪ್ರಮುಖ ಅಂಕಿಅಂಶಗಳು

14ಒಟ್ಟು ಮುಖಾಮುಖಿಯಾದ ಪಂದ್ಯಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತು ಸ್ಪೇನ್‌ ಮುಖಾಮುಖಿಯಾಗಲಿವೆ.


ವಿಶ್ವದ ಅತಿದೊಡ್ಡ ಕ್ರೀಡಾ ಪೈಪೋಟಿಗೆ ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದ್ದು, ‌ಭಾನುವಾರ ಮಧ್ಯರಾತ್ರಿ ಪಂದ್ಯ ನಡೆಯಲಿದೆ. ಅರ್ಜೆಂಟೀನಾ ತಂಡ ಇಂಗ್ಲೆಂಡ್‌ ಎದುರು ಹಾಗೂ ಸ್ಪೇನ್‌ ಪಡೆ ಫ್ರಾನ್ಸ್ ವಿರುದ್ಧ ಗೆದ್ದು ಫೈನಲ್‌ ತಲುಪಿವೆ.


ಕತಾರ್‌ನಲ್ಲಿ ನಡೆದ ಕಳೆದ (2022ರ) ವಿಶ್ವಕಪ್‌ನಲ್ಲಿ ಚಾಂಪಿಯನ್‌ ಎನಿಸಿರುವ ಅರ್ಜೆಂಟೀನಾ, ಮತ್ತೊಮ್ಮೆ ಪಟ್ಟ ಉಳಿಸಿಕೊಳ್ಳಲು ರಣತಂತ್ರ ರೂಪಿಸಿದೆ. 2024ರಲ್ಲಿ ಯುರೋಪಿಯನ್‌ ಚಾಂಪಿಯನ್‌ಷಿಪ್‌ ಗೆದ್ದು ವಿಶ್ವಾಸದ ಅಲೆಯಲ್ಲಿರುವ ಸ್ಪೇನ್, ಮತ್ತೊಂದು ಟ್ರೋಫಿ ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.


ಇತ್ತಂಡಗಳು 2018ರ ಬಳಿಕ ಇದೇ ಮೊದಲ ಸಲ ಮುಖಾಮುಖಿಯಾಗುತ್ತಿವೆ. 2018ರ ಮಾರ್ಚ್‌ 27ರಂದು ನಡೆದ ಪಂದ್ಯದಲ್ಲಿ ಸ್ಪೇನ್‌ 6 - 1 ಗೋಲು ಅಂತರದಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತ್ತು. ನಂತರ ಉಭಯ ತಂಡಗಳು ಒಮ್ಮೆಯೂ ಮುಖಾಮುಖಿ ಹೊರಾಟ ನಡೆಸಿರಲಿಲ್ಲ.


ಹಾಗೆಯೇ, ಎರಡೂ ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಪರಸ್ಪರ ಸೆಣಸಾಟ ನಡೆಸುತ್ತಿರುವುದು ಎರಡನೇ ಸಲ. 1966ರಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲ ಅರ್ಜೆಂಟೀನಾ ಪಡೆ 2 - 1 ಗೋಲು ಅಂತರದ ಜಯ ಸಾಧಿಸಿತ್ತು.

ಒಟ್ಟಾರೆಯಾಗಿ ಇತ್ತಂಡಗಳು ಒಟ್ಟು 14 ಬಾರಿ ಪರಸ್ಪರ ಸೆಣಸಾಟ ನಡೆಸಿವೆ. ಅದರಲ್ಲಿ ಎರಡು ಪಂದ್ಯಗಳು ಡ್ರಾ ಆಗಿವೆ. ಉಳಿದ 12ರಲ್ಲಿ ಸಮಬಲದ ಹೋರಾಟ ಕಂಡು ಬಂದಿದೆ.


ಸ್ಪೇನ್, ಅರ್ಜೆಂಟೀನಾ ಪಂದ್ಯಗಳ ಫಲಿತಾಂಶ


ಸ್ಪೇನ್ 6-1 ಅರ್ಜೆಂಟೀನಾ: 2018ರ ಮಾರ್ಚ್‌ 27 (ಸೌಹಾರ್ದ ಪಂದ್ಯ)


ಅರ್ಜೆಂಟೀನಾ 4-1 ಸ್ಪೇನ್: 2010ರ ಸೆಪ್ಟೆಂಬರ್‌ 7 (ಸೌಹಾರ್ದ ಪಂದ್ಯ)


ಸ್ಪೇನ್ 2-1 ಅರ್ಜೆಂಟೀನಾ: 2009ರ ನವೆಂಬರ್‌ 14 (ಸೌಹಾರ್ದ ಪಂದ್ಯ)


ಸ್ಪೇನ್ 2-1 ಅರ್ಜೆಂಟೀನಾ: 2006ರ ಅಕ್ಟೋಬರ್‌ 11 (ಸೌಹಾರ್ದ ಪಂದ್ಯ)


ಸ್ಪೇನ್ 0-2 ಅರ್ಜೆಂಟೀನಾ: 1999ರ ನವೆಂಬರ್‌ 17 (ಸೌಹಾರ್ದ ಪಂದ್ಯ)


ಸ್ಪೇನ್ 2-1 ಅರ್ಜೆಂಟೀನಾ: 1995ರ ಸೆಪ್ಟೆಂಬರ್‌ 20 (ಸೌಹಾರ್ದ ಪಂದ್ಯ)


ಸ್ಪೇನ್ 1-1 ಅರ್ಜೆಂಟೀನಾ: 1988ರ ಅಕ್ಟೋಬರ್‌ 12 (ಸೌಹಾರ್ದ ಪಂದ್ಯ)


ಅರ್ಜೆಂಟೀನಾ 1-1 ಸ್ಪೇನ್: 1974ರ ಅಕ್ಟೋಬರ್‌ 12 (ಸೌಹಾರ್ದ ಪಂದ್ಯ)


ಸ್ಪೇನ್ 1-0 ಅರ್ಜೆಂಟೀನಾ: 1972ರ ಅಕ್ಟೋಬರ್‌ 11 (ಸೌಹಾರ್ದ ಪಂದ್ಯ)


ಅರ್ಜೆಂಟೀನಾ 2-1 ಸ್ಪೇನ್: 1966ರ ಜುಲೈ 13 (ವಿಶ್ವಕಪ್‌ ಪಂದ್ಯ)


ಸ್ಪೇನ್ 2-0 ಅರ್ಜೆಂಟೀನಾ: 1961ರ ಜೂನ್‌ 11 (ಸೌಹಾರ್ದ ಪಂದ್ಯ)


ಅರ್ಜೆಂಟೀನಾ 2-0 ಸ್ಪೇನ್: 1960ರ ಜುಲೈ 24 (ಸೌಹಾರ್ದ ಪಂದ್ಯ)


ಅರ್ಜೆಂಟೀನಾ 1-0 ಸ್ಪೇನ್: 1953ರ ಜುಲೈ 5 (ಸೌಹಾರ್ದ ಪಂದ್ಯ)


ಸ್ಪೇನ್ 0-1 ಅರ್ಜೆಂಟೀನಾ: 1952ರ ಡಿಸೆಂಬರ್‌ 7 (ಸೌಹಾರ್ದ ಪಂದ್ಯ)


ಸ್ಪೇನ್‌ ತಂಡದ ಫೈನಲ್‌ ಹಾದಿ


ಗುಂಪು ಹಂತ


ಕೇಪ್‌ ವರ್ಡ್‌ ಜೊತೆಗೆ ಗೋಲು ರಹಿತ ಡ್ರಾ


ಸೌದಿ ಅರೇಬಿಯಾ ವಿರುದ್ಧ 4-0 ಜಯ


ಉರುಗ್ವೆ ಎದುರು 1-0 ಗೆಲುವು


32ರ ಘಟ್ಟ: ಆಸ್ಟ್ರಿಯಾ ವಿರುದ್ಧ 3-0ಜಯ


16ರ ಘಟ್ಟ: ಪೋರ್ಚುಗಲ್‌ ಎದುರು 1-0 ಗೆಲುವು


ಕ್ವಾರ್ಟರ್‌ಫೈನಲ್‌: ಬೆಲ್ಜಿಯಂ ವಿರುದ್ಧ 2-1 ಜಯ


ಸೆಮಿಫೈನಲ್‌: ಫ್ರಾನ್ಸ್‌ ಎದುರು 2-0 ಗೆಲುವು


ಅರ್ಜೆಂಟೀನಾ ತಂಡದ ಫೈನಲ್‌ ಹಾದಿ


ಗುಂಪು ಹಂತ


ಅಲ್ಜೀರಿಯಾ ವಿರುದ್ಧ 3-0 ಜಯ


ಆಸ್ಟ್ರಿಯಾ ವಿರುದ್ಧ 2-0 ಗೆಲುವು


ಜೋರ್ಡನ್‌ ವಿರುದ್ಧ 3-1 ಜಯ


32ರ ಘಟ್ಟ: ಕೇಪ್ ವರ್ಡ್‌ ವಿರುದ್ಧ 3-2 ಜಯ


16ರ ಘಟ್ಟ: ಈಜಿಪ್ಟ್‌ ವಿರುದ್ಧ 3-2 ಗೆಲುವು


ಕ್ವಾರ್ಟರ್‌ಫೈನಲ್‌: ಸ್ವಿಟ್ಜರ್ಲೆಂಡ್‌ ವಿರುದ್ಧ 3-1 ಜಯ


ಸೆಮಿಫೈನಲ್‌: ಇಂಗ್ಲೆಂಡ್‌ ವಿರುದ್ಧ 2-1 ಗೆಲುವು






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries