HEALTH TIPS

ವಿದ್ಯುತ್ ಜಾಲದ ಮೇಲೆ ದಾಳಿ ನಡೆದರೆ ಕೆಂಪು ಸಮುದ್ರದ ದ್ವಾರ ಮುಚ್ಚಲು ಹೌದಿಗಳಿಗೆ ಇರಾನ್ ಸೂಚನೆ: ವರದಿ

 ದುಬೈ: ಅಮೆರಿಕವು ಇರಾನ್ ನ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಕೆಂಪು ಸಮುದ್ರದ ತೈಲ ಮಾರ್ಗವನ್ನು ಮುಚ್ಚಲು ಸಿದ್ಧರಾಗಿರುವಂತೆ ಯೆಮನ್ ನ ಹೌದಿ ಸಂಘಟನೆಗೆ ಇರಾನ್ ಸೂಚಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಗುರುವಾರ 'ರಾಯ್ಟರ್ಸ್' ವರದಿ ಮಾಡಿದೆ.

ಇದು ಜಾಗತಿಕ ಇಂಧನ ಪೂರೈಕೆಗೆ ಮತ್ತೊಂದು ಪ್ರಬಲವಾದ ಹೊಸ ಬೆದರಿಕೆಯನ್ನು ಒಡ್ಡಿದೆ. 


ಈ ವಿಷಯದ ಬಗ್ಗೆ ಇರಾನ್ ನ ಉನ್ನತ ನಾಯಕತ್ವದಲ್ಲಿ ಚರ್ಚಿಸಲಾಗಿದೆ ಮತ್ತು ಈ ಸಂದೇಶವನ್ನು ಇರಾನ್ ನ ಮಿತ್ರಪಡೆಯಾದ ಹೌದಿಗಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ಕೆಂಪು ಸಮುದ್ರದ ಪ್ರವೇಶ ದ್ವಾರವಾಗಿರುವ ಬಾಬ್ ಎಲ್-ಮಾಂಡೆಬ್ ಜಲಸಂಧಿಯ ಸಮೀಪ, ಹೊದೈದಾ ಮತ್ತು ಏಡನ್ ಕೊಲ್ಲಿಯತ್ತ ಮುಖ ಮಾಡಿರುವ ಯೆಮನ್ ನ ಗುಡ್ಡಗಾಡು ಪ್ರದೇಶಗಳಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ನಿಯೋಜಿಸುವ ಮೂಲಕ ಹಡಗುಗಳ ಮೇಲೆ ದಾಳಿ ಮಾಡಲು ಹೌದಿ ಸಂಘಟನೆಯು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ದಾಳಿ ಆರಂಭಿಸಲು ಆದೇಶಕ್ಕಾಗಿ ಕಾಯುತ್ತಿದೆ. ಕೆಂಪು ಸಮುದ್ರ ಮತ್ತು ಅದರ ಬಾಬ್ ಎಲ್-ಮಾಂಡೆಬ್ ದ್ವಾರಕ್ಕೆ ಎದುರಾಗುವ ಯಾವುದೇ ಬೆದರಿಕೆಯು ಜಾಗತಿಕ ಇಂಧನ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುವ ಅಪಾಯವನ್ನು ಹೊಂದಿದೆ.

ಹಾರ್ಮುಝ್ ಜಲಸಂಧಿ ಮುಚ್ಚಿರುವುದರಿಂದ, ಕೆಂಪು ಸಮುದ್ರದಲ್ಲಿನ ಹಡಗುಗಳು ಅಥವಾ ಬಂದರುಗಳ ಮೇಲೆ ಹೌದಿಗಳು ನಡೆಸುವ ಯಾವುದೇ ದಾಳಿಯು ಮಧ್ಯಪ್ರಾಚ್ಯದ ಎರಡು ಪ್ರಮುಖ ತೈಲ ರಫ್ತು ಮಾರ್ಗಗಳನ್ನು ಏಕಕಾಲದಲ್ಲಿ ಸ್ಥಗಿತಗೊಳಿಸುತ್ತದೆ. ಇದು ಇಂಧನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಲಿದೆ. ಈಗಾಗಲೇ ಯೆಮನ್ ನಲ್ಲಿರುವ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಪ್ರತಿನಿಧಿಗಳು ಬಾಬ್ ಎಲ್-ಮಾಂಡೆಬ್ ಜಲಸಂಧಿಯನ್ನು ಯಾವಾಗ ಮುಚ್ಚಬೇಕು ಎಂಬ ನಿರ್ಧಾರವನ್ನು ನಿಯಂತ್ರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries