ಕುಂಬಳೆ : ಫುಟ್‍ಬಾಲ್ ಪಂದ್ಯಾಟದ ಮಧ್ಯೆ ರೆಫರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕುಂಬಳೆ ಉಳುವಾರಿನಲ್ಲಿ ನಡೆದಿದೆ. ಕುಂಬಳೆ, ಉಳುವಾರು ಬದ್ರಿಯಾ ಮನ್ಸಿಲ್‍ನ ಅಬ್ದುಲ್ಲಾ ಮತ್ತು ಖದೀಜಾ ಅವರ ಪುತ್ರ ಹಸನ್ ಉಳುವಾರು (46) ಮೃತಪಟ್ಟವರು.
ಬುಧವಾರ ಫುಟ್‍ಬಾಲ್ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ತಲೆಸುತ್ತಿನ ಅನುಭವವುಂಟಾಗಿ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಇವರನ್ನು ಕುಂಬಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಪ್ರಯೋಜನವಾಗಿರಲಿಲ್ಲ. ಇವರು ಮುಸ್ಲಿಂ ಲೀಗ್ ಸಕ್ರಿಯ ಕಾರ್ಯಕರ್ತರಾಗಿದ್ದರು.


