ಕಾಸರಗೋಡು: ಮೂಲತ: ಬದಿಯಡ್ಕ ಉಬ್ರಂಗಳ ನಿವಾಸಿ, ಕಾಞಂಗಾಡು ಕುನ್ನಮ್ಮಲ್‍ನಲ್ಲಿ ವಾಸಿಸುತ್ತಿದ್ದ ನಿವೃತ್ತ ಡಿಎಂಒ ಡಾ. ಯು.ಬಿ. ಕುಣೆಕುಳ್ಳಾಯ (89) ನಿಧನ ಹೊಂದಿದರು. ಜಿಲ್ಲೆಯ ಹಿರಿಯ ಎಲುಬುರೋಗ ತಜ್ಞರಾಗಿದ್ದರು. ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕೋಯಿಕ್ಕೋಡಿನ ಇಎಸ್‍ಐ ಆಸ್ಪತ್ರೆ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಮೋದಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಜಿಎಂಓಎ, ಕಾಞಂಗಾಡು ಐಎಂಎ, ಜಿಲ್ಲಾ ಆರ್ಥೋ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರುಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

