ಬದಿಯಡ್ಕ: ನೆಕ್ರಾಜೆ ಸನಿಹದ ಆಲಂಕೂಡ್ಲಿನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಬೆಂಕಿ ತಗುಲಿದ ಪರಿಣಾಮ ಭಾರೀ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬವರ ಮನೆ ಸನಿಹ ಚಟುವಟಿಕೆ ನಡೆಸುತ್ತಿದ್ದ ಘಟಕದಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದ್ದು, ರಬ್ಬರ್ ಶೀಟ್‍ಗಳು, ಬಾಗಿಲುಗಳು ಮತ್ತಿತರ ಸಾಮಗ್ರಿಗಳು ಹಾನಿಗೀಡಾಗಿದೆ. ಬೆಂಕಿದುರಂತದಿಂದ 2ಲಕ್ಷ ರೂ. ನಷ್ಟ ಅಂದಾಜಿಸಲಾಘಿದೆ.
ಕಾಸರಗೋಡು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಗಮಿಸಿ ಬೆಂಕಿ ಶಮನಗೊಳಿಸಿ, ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಘಟಕಕಕೆ ತಲುಪಲು ಸೂಕ್ತ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಅಗ್ನಿಶಾಮಕ ದಳದ ವಾಹನ ಸಂಚಾರಕ್ಕೂ ತೊಡಕಾಗಿ ಪರಿಣಮಿಸಿತ್ತು.

