ಕುಂಬಳೆ: ಡೆಂಘೆ ಜ್ವರ ಬಾಧಿಸಿ ಅರಿಕ್ಕಾಡಿ ಜೋಡುಗುಳಿ ನಿವಾಸಿ ಮಾಧವ-ಸಂಧ್ಯಾ ದಂಪತಿಯ ಪುತ್ರಿ ಪವಿತ್ರಾ(22)ಮೃತಪಟ್ಟಿದ್ದಾರೆ. ಜ್ವರ ಬಾಧಿಸಿದ್ದ ಇವರನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಡೆಂಘೆ ಖಚಿತಗೊಂಡಿತ್ತು.
ಯುವತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಆರೋಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಮೃತಪಟ್ಟ ಯುವತಿಯ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಮನೆ ಹಾಗೂ ಪರಿಸರ ಪ್ರದೇಶವನ್ನು ಶುಚಿಯಾಗಿಡುವಂತೆ ಆರೋಗ್ಯಾಧಿಕಾರಿಗಳು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

