ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ 5ನೇ ವಾರ್ಡು ಬೆಳಿಂಜದಲ್ಲಿ ಸೋಮವಾರ ರಾತ್ರಿಯ ಭಾರೀ ಗಾಳಿ ಮಳೆಗೆ ಬೃಹತ್ ಆಲದ ಮರವೊಂದು ಆಯುರ್ವೇದ ಡಿಸ್ಪೆನ್ಸರಿ ಬಳಿ ಕುಸಿದು ರಸ್ತೆಗೆ ಬಿದ್ದ ಪರಿಣಾಮ ಈ ದಾರಿಯಾಗಿ ಸಂಚಾರ ಮೊಟಕುಗೊಂಡಿತ್ತು. ಕೂಡಲೇ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಎನ್. ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕದಳದ ಸಹಾಯದಿಂದ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ನಯನ, ಪ್ರಿಯಾಂಕ ಎ.ಸಿ., ವಾರ್ಡು ಸದಸ್ಯ ಮಹೇಶ್, ವಾರ್ಡು ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಪ್ರಮೋದ್ ಮತ್ತಿತರರು ಭಾಗವಹಿಸಿದರು.
ಈ ಭಾಗದಲ್ಲಿ ಇನ್ನೂ ಇದೇ ರೀತಿಯ ರಸ್ತೆ ಬದಿಯಲ್ಲಿ ಬೃಹತ್ ಮರಗಳಿದ್ದು, ಅಪಾಯದ ಭೀತಿಯಲ್ಲಿದೆ. ಇದನ್ನು ತೆರವುಗೊಳಿಸಬೇಕೆಂದು ಪರಿಸರ ನಿವಾಸಿಗಳು ಆಗ್ರಹಿಸಿದ್ದಾರೆ.

.jpg)
