ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಸನೇ ತಕೈಚಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ವ್ಯಾಪಾರ ಒಪ್ಪಂದ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಎರಡು ದೇಶಗಳ ನಡುವೆ ವ್ಯಾಪಾರ ಅಭಿವೃದ್ದಿ ಪಡಿಸುವುದು. ಎಲೆಕ್ಟ್ರಾನಿಕ್ಸ್ ವಲಯಕ್ಕೆ ಬೇಕಾಗಿರುವ ಮುಖ್ಯವಾದ ಸೆಮಿಕಂಡಕ್ಟರ್‌ಗಳ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವುದು.
ಅತ್ಯಾಧುನಿಕ ತಂತ್ರಜ್ಞಾನಗಳ ಪೂರೈಕೆ, ರಕ್ಷಣೆ ಮತ್ತು ಮಿಲಿಟರಿ ಸಹಕಾರ, ಆರ್ಥಿಕ ಪಾಲುದಾರಿಕೆ, ಇಂಧನ ಪೂರೈಕೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿ ಎರಡೂ ದೇಶಗಳು ಒಪ್ಪಂದ ಮಾತುಕತೆ ನಡೆಸಿವೆ.
ಸನೇ ತಕೈಚಿ ಅವರನ್ನು ಕುರಿತು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತ ಮತ್ತು ಜಪಾನ್ ನಡುವಿನ ಸ್ನೇಹವು, ಪರಸ್ಪರ ನಂಬಿಕೆ ಹಾಗೂ ಒಂದೇ ರೀತಿಯ ಆಲೋಚನೆ ಮತ್ತು ಒಂದೇ ರೀತಿಯ ಗುರಿಗಳ ಮೇಲೆ ನಿಂತಿದೆ. ಈ ಪದ್ಧತಿಯು ಹೀಗೆ ಮುಂದುವರೆಯಲಿ. ಎಂದಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿರುವ ಜಪಾನ್ ಪ್ರಧಾನಿ ಸನೇ ತಕೈಚಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ಜುಲೈ 3ರವರೆಗೆ ನಡೆಯಲಿರುವ '16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ'ಯಲ್ಲಿ ಸನೇ ತಕೈಚಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

