HEALTH TIPS

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹುಲಿಗೆ ಕಿಮೊಥೆರಪಿ ?

ತಿರುವನಂತಪುರಂ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ 'ಬಬಿತಾ' ಹೆಸರಿನ ಹೆಣ್ಣು ಹುಲಿಗೆ ತಿರುವನಂತಪುರಂ ಮೃಗಾಲಯದಲ್ಲಿ ಕಿಮೊಥೆರಪಿ ಪ್ರಾರಂಭಿಸಲಾಗಿದೆ.

ಬಬಿತಾಗೆ ಅಡೆನೊಕಾರ್ಸಿನೋಮ (ಅಂಗಾಂಶದ ಗ್ರಂಥಿಗಳ ಕೋಶಗಳಿಗೆ ಕ್ಯಾನ್ಸರ್‌) ಇರುವುದು ಹಲವು ತಿಂಗಳ ಹಿಂದೆಯೇ ಪತ್ತೆಯಾಗಿತ್ತು. 


ಆದರೆ, ಆರೋಗ್ಯ ಸಂಬಂಧಿಸಿದ ನಿಯಮಾವಳಿ, ಚಿಕಿತ್ಸೆ ಆಯ್ಕೆಯ ಕೊರತೆಯ ಕಾರಣಗಳಿಂದಾಗಿ ಉಪಶಮನಕಾರಿ (ರೋಗ ಹೆಚ್ಚಾಗದಂತೆ ತಡೆಯುವ ನಿಯಂತ್ರಿತ) ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿತ್ತು.

ಕ್ಯಾನ್ಸರ್‌, ಗೆಡ್ಡೆಯ ರೂಪದಲ್ಲಿರದೆ, ದೇಹದ ತುಂಬ ಹರಡಿಕೊಂಡಿದೆ. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರ ಕೈಬಿಡಲಾಯಿತು.

ಹೊಟ್ಟೆಯ ಭಾಗದಲ್ಲಿ ದ್ರವ ಶೇಖರಣೆ (ಅಸೈಟಿಸ್) ಆಗಿ, ಹಸಿವಾಗುವುದು ಕಡಿಮೆಯಾಗಿತ್ತು. ಹೀಗಾಗಿ, ಮೃಗಾಲಯದ ವೈದ್ಯ ನಿಕೇಶ್‌ ಕಿರಣ್‌ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಡಾ. ಸಚಿನ್ ಮನೋಜ್, ಡಾ. ಜಯಕೃಷ್ಣನ್ ನಾರಾಯಣನ್, ಡಾ. ಐಶ್ವರ್ಯ, ಕುಡಪ್ಪನಕ್ಕುನ್ನು ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ, ರಾಜ್ಯ ಪ್ರಾಣಿ ರೋಗ ಸಂಸ್ಥೆಯ ಡಾ. ಹರೀಶ್ ಸಿ. ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ದೇವಿ ಎಸ್.ಎಸ್. ತಂಡದಲ್ಲಿದ್ದರು.

ಬೇಟೆ ಆತಂಕ, ಅಳಿವಿನಂಚಿನ ಪ‍ಟ್ಟಿಯಲ್ಲಿರುವ ಜಿರಾಫೆಗಳ ಅರಣ್ಯ ಜೀವನ ಹೇಗಿರಲಿದೆ158 ವರ್ಷಗಳ ಬಳಿಕ ಹಿಮಾಲಯದ ತಪ್ಪಲಿನಲ್ಲಿ ಪತ್ತೆಯಾಯ್ತು ಅಪರೂಪದ ಸಸ್ಯ!

ಸಮಗ್ರ ತಪಾಸನೆ ಬಳಿಕ ಬಬಿತಾಗೆ ಅಡೆನೊಕಾರ್ಸಿನೋಮ ಇರುವುದನ್ನು ಈ ತಂಡ ಖಚಿತಪಡಿಸಿತ್ತು.

ಬಬಿತಾ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದಂತೆ, ಮೃಗಾಲಯದ ಅಧಿಕಾರಿಗಳು ತಜ್ಞರ ತಂಡದೊಂದಿಗೆ ಸಮಾಲೋಚನೆ ನಡೆಸಿದ ನಂತರ ಕೀಮೋಥೆರಪಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಬಬಿತಾ ಹುಲಿಯನ್ನು 2024ರ ಮಾರ್ಚ್‌ನಲ್ಲಿ ದಕ್ಷಿಣ ವಯನಾಡ್ ಅರಣ್ಯ ಪ್ರದೇಶದಿಂದ ಸೆರೆಹಿಡಿದು, ತಿರುವನಂತಪುರಂ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries