HEALTH TIPS

ನೆಟ್ಟಣಿಗೆ ಸರ್ಕಾರಿ ಶಾಲೆಗೆ ಆತಂಕ ಒಡ್ಡುತ್ತಿದ್ದ ಅಪಾಯಕಾರಿ ಮರಗಳ ತೆರವು

ಮುಳ್ಳೇರಿಯ: ನೆಟ್ಟಣಿಗೆ ಸರ್ಕಾರಿ ಶಾಲೆಯ ಬಳಿ ಆತಂಕ ಸೃಷ್ಟಿಸಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು. ಶಾಲಾ ತರಗತಿ ಕೊಠಡಿಗಳಿಗೆ ಹಾಗೂ ಅಡುಗೆ ಕೋಣೆ ಹತ್ತಿರದಲ್ಲೇ ಇದ್ದ ಒಣಗಿದ ಬೃಹತ್ ಮೂರು ಅಕೇಶಿಯಾ ಮರಗಳನ್ನು ತೆರವುಗೊಳಿಸಲಾಗಿದೆ. ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದುಹೋಗಿದ್ದು, ಯಾವುದೇ ಕ್ಷಣ ಮುರಿದು ಬೀಳುವ ಭೀತಿ ನೆಲೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಹರ್ಷ ಹಾಗೂ ಪಿಟಿಎ ಜಂಟಿಯಾಗಿ ಪಂಚಾಯತಿಗೆ ಮನವಿ ಸಲ್ಲಿಸಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯತಿ, ವನ ಸಂರಕ್ಷಣಾ ಸಮಿತಿ ಒಳಗೊಂಡ 'ಟ್ರೀ ಕಮಿಟಿ' ಪರಿಶೀಲನೆ ನಡೆಸಿ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮರಗಳ ರೆಂಬೆಗಳನ್ನು ಕಡಿದು ಬಳಿಕ ಬುಡ ಸಮೇತ ತೆರವುಗೊಳಿಸಲಾಯಿತು.

ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಕುಮಾರ ಎನ್, ಸದಸ್ಯರಾದ ಶ್ರೀಧರ, ಸತ್ಯವತಿ, ಶಿಕ್ಷಕರು, ವನ ಸಂರಕ್ಷಣಾ ಸಮಿತಿ ಪದಾಧಿಕಾರಗಳು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries