HEALTH TIPS

ದಶಕಗಳಲ್ಲೇ ಅತಿ ಹೆಚ್ಚು ತೈಲ ಬೆಲೆ ಕಡಿತ ಘೋಷಿಸಿದ ಸೌದಿ ಅರೇಬಿಯಾ : ವರದಿ

ರಿಯಾದ್: ಜಾಗತಿಕ ಪೂರೈಕೆಯ ಹೆಚ್ಚಳದಿಂದಾಗಿ ಮಾರಾಟಗಾರರ ನಡುವೆ ಪೈಪೋಟಿ ತೀವ್ರಗೊಂಡಿರುವುದರಿಂದ, ಸೌದಿ ಅರೇಬಿಯಾವು ಏಷ್ಯಾದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡಲು ಪ್ರಾರಂಭಿಸಿದೆ ಎಂದು ಬ್ಲೂಮ್‍ಬರ್ಗ್ ವರದಿ ಮಾಡಿದೆ.


ಸೌದಿ ಅರೇಬಿಯಾದ ಸರಕಾರಿ ತೈಲ ಉತ್ಪಾದನಾ ಸಂಸ್ಥೆಯಾದ `ಸೌದಿ ಅರಾಮ್ಕೊ' ಮುಂದಿನ ತಿಂಗಳ `ಅರಬ್ ಲೈಟ್' ತೈಲದ ಬೆಲೆಯನ್ನು ಪ್ರತಿ ಬ್ಯಾರೆಲ್‍ಗೆ 11 ಡಾಲರ್‌ನಷ್ಟು ಕಡಿತಗೊಳಿಸಲಿದೆ.

ಇದು ಪ್ರಾದೇಶಿಕ ಮಾನದಂಡದ ಬೆಲೆಗಿಂತ 1.50 ಡಾಲರ್‌ ನಷ್ಟು ಕಡಿಮೆಯಾಗಲಿದೆ. ಇದಕ್ಕೂ ಮುನ್ನ ಸೌದಿ ದೇಶವು 2020 ಮತ್ತು 2015ರ ಬೆಲೆ ಸಮರದ ಸಮಯದಲ್ಲಿ ಮಾತ್ರ ಹೀಗೆ ರಿಯಾಯಿತಿ ದರದಲ್ಲಿ ತೈಲವನ್ನು ಮಾರಾಟ ಮಾಡಿತ್ತು. ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಂತರ ಒಪ್ಪಂದಕ್ಕೆ ಸಹಿ ಬಿದ್ದ ನಂತರ, ಪರ್ಷಿಯನ್ ಗಲ್ಫ್ ಪ್ರದೇಶದ ಉತ್ಪಾದಕರು ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಪೂರೈಕೆಯನ್ನು ಹೆಚ್ಚಿಸಿದ್ದಾರೆ. ಇದು ತೈಲ ಮಾರುಕಟ್ಟೆಯ ಮೇಲೆ ಒತ್ತಡವನ್ನು ಉಂಟುಮಾಡಿದ್ದು, ಉತ್ಪಾದಕರು ತಮ್ಮ ಬೆಲೆಗಳನ್ನು ಕಡಿತಗೊಳಿಸುವಂತೆ ಮಾಡಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries