ಟೆಹರಾನ್: ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರುತ್ತಿದ್ದು, ಕೋಟ್ಯಂತರ ಜನ ಭಾಗವಹಿಸುತ್ತಿದ್ದಾರೆ. ಮೇಲ್ನೋಟಕ್ಕೆ ಎಲ್ಲವೂ ಶಾಂತಿಯುತವಾಗಿದೆ ಎಂದು ಇರಾನ್ ಸರ್ಕಾರ ಬಿಂಬಿಸುತ್ತಿದ್ದರೂ, ಅಪಾರ ಜನಸಂದಣಿಯಿಂದ ಉಂಟಾಗಬಹುದಾದ ದುರಂತ ಮತ್ತು ಸಂಭವನೀಯ ದಾಳಿಯ ಭೀತಿಯಿಂದಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸಮಾಧಿಗಾಗಿ ಸಾವಿರಾರು ಗುಂಡಿಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಂಡಿದ್ದಾರೆ ಎಂದು ವರದಿಯಾಗಿದೆ.
ಖಮೇನಿ ಅಂತ್ಯಕ್ರಿಯೆ: ಸಾವಿರಾರು ಸಮಾಧಿ ಸಿದ್ಧಪಡಿಸಿದ ಇರಾನ್ ಸರ್ಕಾರ!
ಒಂದು ಸಾಲಿನಲ್ಲಿಇರಾನ್ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಭಾರಿ ಜನಸಂದಣಿ ಮತ್ತು ಭದ್ರತಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಸಿದ್ಧತೆಗಳನ್ನು ಕೈಗೊಂಡಿದೆ.ಪ್ರಮುಖ ಸಂಗತಿಗಳು• ಸಾವಿರಾರು ಸಮಾಧಿಗಳ ಮುಂಜಾಗ್ರತೆಜನಸಂದಣಿ ಮತ್ತು ತೀವ್ರ ಬೇಸಿಗೆಯಿಂದ ಉಂಟಾಗಬಹುದಾದ ಕಾಲ್ತುಳಿತ ಅಥವಾ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು, ಟೆಹರಾನ್‌ನ ಸ್ಮಶಾನದಲ್ಲಿ ಸಾವಿರಾರು ಸಮಾಧಿಗಳನ್ನು ಮುಂಚಿತವಾಗಿ ಸಿದ್ಧಪಡಿಸಲಾಗಿದೆ.• ಹೆಚ್ಚಿದ ಹೈ ಅಲರ್ಟ್ ಭದ್ರತೆಇಸ್ರೇಲ್ ಮತ್ತು ಅಮೆರಿಕದಂತಹ ದೇಶಗಳ ಬೆದರಿಕೆ ಹಾಗೂ ದೇಶೀಯ ಉಗ್ರ ಸಂಘಟನೆಗಳ ಭೀತಿ ಇರುವುದರಿಂದ ಅಂತ್ಯಕ್ರಿಯೆಯ ವೇಳೆ ಕಠಿಣ ಭದ್ರತೆಯನ್ನು ನಿಯೋಜಿಸಲಾಗಿದೆ.• ವಾಯುಪ್ರದೇಶ ಸಂಪೂರ್ಣ ಬಂದ್ಸಂಭಾವ್ಯ ವೈಮಾನಿಕ ಅಥವಾ ಡ್ರೋನ್ ದಾಳಿಯನ್ನು ತಡೆಗಟ್ಟಲು ಇರಾನ್ ಸರ್ಕಾರ ಸೋಮವಾರದಂದು ಟೆಹರಾನ್‌ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.
ಜರ್ಮನ್ ಮೂಲದ ಪತ್ರಿಕೆ 'ಡೈ ವೆಲ್ಟ್' (ಆie Weಟಣ) ವರದಿಯ ಪ್ರಕಾರ, ಕೋಟಿಗಟ್ಟಲೆ ಜನ ಸೇರುವ ಈ ಮೆರವಣಿಗೆ ವೇಳೆ 1,500 ರಿಂದ 3,000 ಜನ ಸಾವಿಗೀಡಾಗಬಹುದು ಎಂದು ಅಂದಾಜಿಸಿ ಇರಾನ್ ಸರ್ಕಾರ, ಅತ್ಯಂತ ರಹಸ್ಯವಾಗಿ ಈ ತುರ್ತು ಯೋಜನೆಯನ್ನು ಸಿದ್ಧಪಡಿಸಿದೆ ಎಂದಿದೆ.
ಸಾವಿರಾರು ಸಮಾಧಿಗಳು ಸಿದ್ಧ
3,000 ಸಾವು ಸಾಧ್ಯತೆ: ಕೋಟ್ಯಂತರ ಜನರ ಆಗಮನ ಮತ್ತು ಅಲ್ಲಿನ ತೀವ್ರ ಬೇಸಿಗೆಯ ಶಾಖದಿಂದಾಗಿ ಕಾಲ್ತುಳಿತ ಅಥವಾ ಇತರ ಅವಘಡಗಳು ಸಂಭವಿಸಿ 1,500 ರಿಂದ 3,000 ಜನ ಸಾವಿಗೀಡಾಗಬಹುದು ಎಂದು ಇರಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ.
ಟೆಹರಾನ್‌ನ ಪ್ರಸಿದ್ಧ 'ಬೆಹೆಶ್ತ್-ಎ ಜಹ್ರಾ' ಸ್ಮಶಾನದಲ್ಲಿ ಸಮಾಧಿಗಾಗಿ ಸಾವಿರಾರು ಗುಂಡಿ ಅಗೆಯಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಟೆಹರಾನ್ ಮುನ್ಸಿಪಾಲಿಟಿಯ ನೌಕರ, ಸಮಾಧಿಗಳನ್ನು ಸಿದ್ಧಪಡಿಸಿಟ್ಟಿರುವುದು ನಿಜ. ಭಾರಿ ಜನಸಂದಣಿ ಮತ್ತು ತೀವ್ರ ಶಾಖ ಇರುವುದರಿಂದ ಏನಾಗಲಿದೆಯೋ ಯಾರಿಗೂ ಗೊತ್ತಿಲ್ಲ. ಒಂದು ವೇಳೆ 3,000 ಸಾವು ಸಂಭವಿಸಿದರೂ ನಿಭಾಯಿಸಲು ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ಟೆಹರಾನ್‌ನಲ್ಲಿ ಹೈ ಅಲರ್ಟ್
ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭ ಕೇವಲ ಕಾಲ್ತುಳಿತದ ಭೀತಿಯನ್ನಷ್ಟೇ ಅಲ್ಲದೇ, ಭದ್ರತಾ ಸವಾಲುಗಳನ್ನೂ ಎದುರಿಸುತ್ತಿದೆ. ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿಯನ್ನು ಕೊಲ್ಲುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಎಚ್ಚರಿಸಿದ್ದರು. ಹೀಗಾಗಿ ಹೈ ಅಲರ್ಟ್ ಘೋಷಿಸಲಾಗಿದೆ.
ವಾಯುಪ್ರದೇಶ ಬಂದ್
ಸಂಭಾವ್ಯ ವೈಮಾನಿಕ ಅಥವಾ ಡ್ರೋನ್ ದಾಳಿಯ ಭೀತಿಯಿಂದಾಗಿ ಇರಾನ್ ಸರ್ಕಾರವು ಸೋಮವಾರ ರಾಜಧಾನಿ ಟೆಹರಾನ್‌ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.
ಆಂತರಿಕ, ಬಾಹ್ಯ ಭೀತಿ
ಇರಾನ್‌ಗೆ ಇಸ್ರೇಲ್ ಮತ್ತು ಅಮೆರಿಕ ಮಾತ್ರವಲ್ಲದೇ, ದೇಶದೊಳಗೆ ಸಕ್ರಿಯವಾಗಿರುವ ಕುರ್ದಿಷ್ ಉಗ್ರರು, ಬಲೋಚ್ ಪ್ರತ್ಯೇಕತಾವಾದಿಗಳು ಹಾಗೂ ದೇಶಭ್ರಷ್ಟ 'ಮುಜಾಹಿದ್ದೀನ್-ಎ ಖಲ್ಕ್' (ಒeಏ) ಸಂಘಟನೆಗಳಿಂದಲೂ ದಾಳಿ ಭೀತಿಯಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಆತಂಕ ವ್ಯಕ್ತಪಡಿಸಿದೆ.
ಇತಿಹಾಸದ ಕರಾಳ ನೆನಪು
ಇರಾನ್‌ನಲ್ಲಿ ಅಂತ್ಯಕ್ರಿಯೆ ವೇಳೆ ದುರಂತ ಸಂಭವಿಸಿದ ಕರಾಳ ಇತಿಹಾಸವಿದೆ.
2020ರಲ್ಲಿ ಐಆರ್‌ಜಿಸಿ ಕಮಾಂಡರ್ ಖಾಸೆಮ್ ಸುಲೈಮಾನಿ ಅಂತ್ಯಕ್ರಿಯೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 56 ಜನ ಸಾವಿಗೀಡಾಗಿದ್ದರು.
ಅದಕ್ಕೂ ಮುನ್ನ 1989ರಲ್ಲಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಯಲ್ಲೂ ಭಾರಿ ಗೊಂದಲ ಸೃಷ್ಟಿಯಾಗಿ 8 ಜನ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು.
ಮಶಾದ್‌ನಲ್ಲಿ ಸಮಾಧಿ
ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಶನಿವಾರದಿಂದ ಆರಂಭವಾಗಿವೆ. ರಾಜಧಾನಿ ಟೆಹರಾನ್‌ನ ಗ್ರ್ಯಾಂಡ್ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶವಪೆಟ್ಟಿಗೆಗಳನ್ನು ಮೂರು ದಿನಗಳವರೆಗೆ ಟೆಹರಾನ್‌ನಲ್ಲಿ ಇರಿಸಲಾಗುತ್ತದೆ.
ಮಂಗಳವಾರ ಕೋಮ್ ನಗರಕ್ಕೆ, ಬುಧವಾರ ಇರಾಕ್‌ಗೆ ಸ್ಥಳಾಂತರಿಸಲಾಗುತ್ತದೆ. ಖಮೇನಿ ಅವರ ಜನ್ಮಸ್ಥಳ ಮಶಾದ್‌ನಲ್ಲಿ ಮಗಳು, ಅಳಿಯ, ಮೊಜ್ತಬಾ ಖಮೇನಿ ಅವರ ಪತ್ನಿ ಜಹ್ರಾ ಹದ್ದಾದ್ ಅಡೆಲ್, 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಅವರೊಂದಿಗೆ ಖಮೇನಿ ಅವರನ್ನು ಗುರುವಾರ ಸಮಾಧಿ ಮಾಡಲಾಗುತ್ತದೆ.
ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಆರಂಭಿಸಿದ್ದು, ಅಂದು ನಡೆದ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ, ಅವರ ಕುಟುಂಬದ ಸದಸ್ಯರು ಹಾಗೂ ಉನ್ನತ ಅಧಿಕಾರಿಗಳು ಮೃತಪಟ್ಟಿದ್ದರು. 1989ರಿಂದ ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಖಮೇನಿ ಅವರಿಗೆ 86 ವಯಸ್ಸಾಗಿತ್ತು.
ಆಧಾರ: ಎನ್‌ಡಿಟಿವಿ

