HEALTH TIPS

ಖಮೇನಿ ಅಂತ್ಯಕ್ರಿಯೆ ಮಧ್ಯೆ ಹೊರ್ಮುಜ್‍‌ನಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ: ವರದಿ

 ಟೆಹರಾನ್: ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತಿದ್ದ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಸೋಮವಾರ ರಾತ್ರಿ ಕನಿಷ್ಠ ಎರಡು ಕ್ಷಿಪಣಿಗಳ ದಾಳಿ ನಡೆಸಿವೆ ಎಂದು ಇಬ್ಬರು ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ 'ಆಕ್ಸಿಯೋಸ್' ವರದಿ ಮಾಡಿದೆ.


ಈ ದಾಳಿಯಿಂದಾಗಿ ಎರಡು ವಾಣಿಜ್ಯ ಹಡಗುಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಮಾನ್‌ನ ಪೂರ್ವ ಭಾಗದಲ್ಲಿ ಮಂಗಳವಾರ ಮುಂಜಾನೆ ಅಪರಿಚಿತ ವಸ್ತುವೊಂದು ಅಪ್ಪಳಿಸಿದ ಪರಿಣಾಮ ತೈಲ ಟ್ಯಾಂಕರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬ್ರಿಟನ್‌ನ ಕಡಲ ಭದ್ರತಾ ಸಂಸ್ಥೆ (ಯುಕೆಎಂಟಿಒ) ತಿಳಿಸಿದೆ.

ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ನಡೆಯುತ್ತಿರುವ ಮಧ್ಯೆ ಈ ದಾಳಿ ವರದಿಯಾಗಿದೆ.

ಅಮೆರಿಕ-ಇರಾನ್ ನಡುವಣ ಶಾಂತಿ ಮಾತುಕತೆಗೆ ಸಂಬಂಧಿಸಿದ ಸಂಧಾನ ಮಾತುಕತೆಗಳು ನಡೆಯುತ್ತಿರುವ ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ನಿರಂತರ ದಾಳಿಗಳು ವರದಿಯಾಗುತ್ತಿದ್ದು, ಕಡಲ ಭದ್ರತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ.

ಮತ್ತೊಂದೆಡೆ ಎಚ್ಚರಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ನಾವು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ಅವರ ಕಥೆಯನ್ನು ಮುಗಿಸುತ್ತೇವೆ' ಎಂದಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries