HEALTH TIPS

ಚೀನಾದಿಂದ ದೂರಗಾಮಿ ಕ್ಷಿಪಣಿ ಪರೀಕ್ಷೆ: ಜಪಾನ್‌, ಆಸ್ಟ್ರೇಲಿಯಾ ಟೀಕೆ

 ಬೀಜಿಂಗ್‌: ಚೀನಾವು ಪೆಸಿಫಿಕ್ ಸಾಗರದಲ್ಲಿರುವ ತನ್ನ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯಿಂದ ಸೋಮವಾರ ನಡೆಸಿದ ದೂರಗಾಮಿ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದ್ದು, ಈ ಬಗ್ಗೆ ಜಪಾನ್‌ ಮತ್ತು ಆಸ್ಟ್ರೇಲಿಯಾ ಅಸಮಾಧಾನ ವ್ಯಕ್ತಪಡಿಸಿವೆ.


'ಸಿಡಿತಲೆ ಮಾದರಿಯನ್ನು ಹೊತ್ತಿದ್ದ ಕ್ಷಿಪಣಿಯು ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ನಿಗದಿತ ಜಲಪ್ರದೇಶದಲ್ಲಿ ಬಿದ್ದಿದೆ' ಎಂದು ಚೀನಾದ ಸೇನೆಯು ತಿಳಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

'ವಾರ್ಷಿಕ ತರಬೇತಿಯ ಭಾಗವಾಗಿ ಈ ಪರೀಕ್ಷಾರ್ಥ ಉಡಾವಣೆ ನಡೆದಿದ್ದು, ಯಾವುದೇ ದೇಶವನ್ನು ಗುರಿಯಾಗಿಸಿಕೊಂಡು ಉಡಾವಣೆ ನಡೆಸಿಲ್ಲ. ಈ ಬಗ್ಗೆ ನೆರೆಯ ದೇಶಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು' ಎಂದು ಚೀನಾ ಸೇನೆ ಹೇಳಿದೆ. ಉಡಾವಣೆಗೂ ಮೊದಲು ಚೀನಾ ಮಾಹಿತಿ ನೀಡಿರುವುದನ್ನು ಜಪಾನ್‌ ಮತ್ತು ಆಸ್ಟ್ರೇಲಿಯಾ ದೃಢಪಡಿಸಿವೆ. ಆದರೆ ಉಭಯ ದೇಶಗಳು ಚೀನಾವನ್ನು ಟೀಕಿಸಿದ್ದು, 'ಪೆಸಿಫಿಕ್‌ ಸಾಗರ ಭಾಗದಲ್ಲಿ ಚೀನಾ ತನ್ನ ಸೇನಾಬಲವನ್ನು ಹೆಚ್ಚಿಸುತ್ತಿರುವುದಕ್ಕೆ ಇದು ಕೈಗನ್ನಡಿಯಾಗಿದೆ' ಎಂದು ಹೇಳಿವೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries